ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಾರ್ಖಂಡ್ ಚುನಾವಣೆ: ಸೇತುವೆ ಸ್ಪೋಟಿಸಿದ ನಕ್ಸಲರು, ಮತದಾನಕ್ಕೆ ಅಡ್ಡಿ ಇಲ್ಲ ಎಂದ ಅಧಿಕಾರಿಗಳು!

ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿರುವಂತೆಯೇ ಅತ್ತ ಚುನಾವಣೆ ಬಹಿಷ್ಕರಿಸಿರುವ ನಕ್ಸಲೀಯರು ಸೇತುವೆಯೊಂದನ್ನು ಸ್ಫೋಟಿಸಿ ಎಚ್ಚರಿಕೆ ನೀಡಿದ್ದಾರೆ.

ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿರುವಂತೆಯೇ ಅತ್ತ ಚುನಾವಣೆ ಬಹಿಷ್ಕರಿಸಿರುವ ನಕ್ಸಲೀಯರು ಸೇತುವೆಯೊಂದನ್ನು ಸ್ಫೋಟಿಸಿ ಎಚ್ಚರಿಕೆ ನೀಡಿದ್ದಾರೆ.

ಹೌದು.. ಜಾರ್ಖಂಡ್ ನ ಒಟ್ಟು 13 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಸಾಲುಗಟ್ಟಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಏತನ್ಮಧ್ಯೆ ಮತದಾನ ಬಹಿಷ್ಕರಿಸುವಂತೆ ಎಚ್ಚರಿಕೆ ನೀಡಿದ್ದ ನಕ್ಸಲೀಯರು ಮತದಾನಕ್ಕೆ ಅಡ್ಡಿಪಡಿಸಲೆಂದು ಸೇತುವೆಯೊಂದನ್ನು ಸ್ಫೋಟಿಸಿದ್ದಾರೆ.

ಗುಮ್ಲಾ ಜಿಲ್ಲೆಯ ಬಿಶ್ಣುಪುರ್ ನಲ್ಲಿರುವ ಸೇತುವೆಯನ್ನು ನಕ್ಸಲರು ಸ್ಫೋಟಿಸಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಉಪ ಜಿಲ್ಲಾಧಿಕಾರಿ ಶಶಿ ರಂಜನ್ ಅವರು, ಸೇತುವೆ ಸ್ಫೋಟದಲ್ಲಿ ಯಾವುದೇ ರೀತಿಯ ಸಾವುನೋವು ಸಂಭವಿಸಿಲ್ಲ. ಅಂತೆಯೇ ಯಾವುದೇ ಕಾರಣಕ್ಕೂ ಮತದಾನ ಸ್ಥಗಿತವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com