ಕಾರು ದುಬಾರಿಯಾದರೆ, ದಂಡ ಕೂಡ ದುಬಾರಿಯೇ..?; 9.8 ಲಕ್ಷ ರೂ ದಂಡ!

ದುಬಾರಿ ಕಾರು ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಆರ್ ಟಿಒ ಅಧಿಕಾರಿಗಳು ದುಬಾರಿ ದಂಡ ವಿಧಿಸಿರುವ ಘಟನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆದಿದೆ.
ಪಾರ್ಶ್ ಕಾರು
ಪಾರ್ಶ್ ಕಾರು

ಅಹ್ಮದಾಬಾದ್: ದುಬಾರಿ ಕಾರು ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಆರ್ ಟಿಒ ಅಧಿಕಾರಿಗಳು ದುಬಾರಿ ದಂಡ ವಿಧಿಸಿರುವ ಘಟನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆದಿದೆ.

ಹೌದು. ಅಹ್ಮದಾಬಾದ್ ಆರ್ ಟಿಒ ಅಧಿಕಾರಿಗಳು ದುಬಾರಿ ಪಾರ್ಶ್ 911 ಕಾರಿನ ಮಾಲೀಕರಿಗೆ ಬರೊಬ್ಬರಿ 9.8 ಲಕ್ಷ ರೂ ದಂಡ ವಿಧಿಸಿದ್ದಾರೆ. ಅಹ್ಮದಾಬಾದ್ ನಲ್ಲಿ ಸಂಚರಿಸುತ್ತಿದ್ದ ಕಾರನ್ನು ಹೆಲ್ಮೆಟ್ ಕ್ರಾಸ್ ರಸ್ತೆಯಲ್ಲಿ ತಡೆ ಹಿಡಿದ ಪೊಲೀಸರು ಚಾಲಕನಿಂದ ದಾಖಲೆಗಳನ್ನು ಕೇಳಿದ್ದಾರೆ. ಈ ವೇಳೆ ಚಾಲಕ ಸರಿಯಾದ ದಾಖಲೆ ತೋರಿಸದ ಪರಿಣಾಮ ಅತನಿಗೆ ಬರೊಬ್ಬರಿ 9.8 ಲಕ್ಷ ರೂ ದಂಡ ವಿಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಸಿಲ್ವರ್ ಬಣ್ಣದ ಪಾರ್ಶ್ 911 ಕಾರು ಸುಮಾರು 2 ಕೋಟಿ ರೂ ಮೌಲ್ಯದ್ದಾಗಿದೆ. ಆದರೆ ಕಾರಿನ ಚಾಲಕ ಕಾರಿಗೆ ಸೂಕ್ತ ನಂಬರ್ ಪ್ಲೇಟ್ ಅಳವಡಿಸಿಲ್ಲ. ಅಲ್ಲದೆ ಕಾರಿನಲ್ಲಿ ಸರಿಯಾದ ದಾಖಲೆಗಳೂ ಕೂಡ ಇಲ್ಲ. ಇದೇ ಕಾರಣಕ್ಕೆ ಈ ಹಿಂದಿನ ಎಲ್ಲ ದಂಡಗಳನ್ನು ಲೆಕ್ಕ ಹಾಕಿ ಇದೀಗ 9.8ಲಕ್ಷ ರೂಗಳನ್ನು ದಂಡ ಹಾಕಲಾಗಿದೆ.

ಪ್ರಸ್ತುತ ಕಾರನ್ನು ತಮ್ಮ ವಶಕ್ಕೆ ಪಡೆಯಲಾಗಿದ್ದು, ದಂಡದ ಸಂಪೂರ್ಣ ಹಣ ಬಂದ ಬಳಿಕವಷ್ಟೇ ಕಾರನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com