ವಿಧಾನಸಭಾ ನಡವಳಿ ಉಲ್ಲಂಘನೆ: ರಾಜ್ಯಪಾಲರಿಗೆ ದೂರು- ದೇವೇಂದ್ರ ಫಡ್ನವೀಸ್ 

ವಿಧಾನಸಭಾ ನಡವಳಿಗಳನ್ನು ಉಲ್ಲಂಘಿಸಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.
ದೇವೇಂದ್ರ ಫಡ್ನವೀಸ್
ದೇವೇಂದ್ರ ಫಡ್ನವೀಸ್

ಮುಂಬೈ: ವಿಧಾನಸಭಾ ನಡವಳಿಗಳನ್ನು ಉಲ್ಲಂಘಿಸಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.

ವಿಶ್ವಾಸಮತ ಯಾಚನೆ ವೇಳೆಯಲ್ಲಿ ಬಿಜೆಪಿ ಸಭಾತ್ಯಾಗ ನಡೆಸಿ ಸದನದಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಹಂಗಾಮಿ ಸ್ಪೀಕರ್  ನೇಮಕ ಅಸಂವಿಧಾನಿಕವಾಗಿದೆ. ಈ ಅಧಿವೇಶನ ಅಕ್ರಮ ಹಾಗೂ ಅಸಂವಿಧಾನಿಕವಾಗಿದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಕಲಾಪ ಆರಂಭದಲ್ಲಿ ವಿವಿಧ  ವಿಚಾರಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ , ಪ್ರಶ್ನೆಗಳ ಸುರಿಮಳೆಗರೆದರು. 

ಬಿಜೆಪಿ ಸದಸ್ಯರ ಸಭಾತ್ಯಾಗದ ನಂತರ ಸ್ಪೀಕರ್ ದಿಲೀಪ್ ವಾಲ್ಸೆ ಪಾಟೀಲ್   ವಿಶ್ವಾಸ ಮತಯಾಚನೆ ಪ್ರಕ್ರಿಯೆಯನ್ನು ನಡೆಸಿದರು. ಬಿಜೆಪಿಯ ಸಭಾತ್ಯಾಗದ ನಡುವೆ 169 ಸದಸ್ಯರು ಅಘಾಡಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com