ಗಡಿದಾಟಿದರೆ ಮತ್ತೆ  ಸರ್ಜಿಕಲ್ ದಾಳಿ: ಪಾಕ್ ಗೆ ರಾವತ್ ಖಡಕ್ ಎಚ್ಚರಿಕೆ

ಪಾಕಿಸ್ತಾನ ಗಡಿದಾಟಿ ಬಂದು ಶಾಂತಿ ಹಾಳು ಮಾಡುವ ಪ್ರಯತ್ನ ಮಾಡಿದರೆ ಮತ್ತೊಮ್ಮೆ ಸರ್ಜಿಕಲ್ ದಾಳಿ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಸೇನಾ ಮುಖ್ಸಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ಗಡಿದಾಟಿದರೆ ಮತ್ತೆ  ಸರ್ಜಿಕಲ್ ದಾಳಿ: ಪಾಕ್ ಗೆ ರಾವತ್ ಖಡಕ್ ಎಚ್ಚರಿಕೆ

ನವದೆಹಲಿ: ಪಾಕಿಸ್ತಾನ ಗಡಿದಾಟಿ ಬಂದು ಶಾಂತಿ ಹಾಳು ಮಾಡುವ ಪ್ರಯತ್ನ ಮಾಡಿದರೆ ಮತ್ತೊಮ್ಮೆ ಸರ್ಜಿಕಲ್ ದಾಳಿ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಸೇನಾ ಮುಖ್ಸಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರಿಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಅವರು, ಪಾಕಿಸ್ತಾನ ಮತ್ತು ಪಾಕ್ ಬೆಂಬಲಿತ ಉಗ್ರರಿಗೆ  ಖಡಕ್ ಸೂಚನೆ, ಎಚ್ಚರಿಕೆ ನೀಡಿದ್ದಾರೆ. 'ಗಡಿಯಲ್ಲಿ ಇನ್ನು  ಉಗ್ರಗಾಮಿ ಚಟುವಟಿಕೆಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು  ಗುಡುಗಿದ್ದಾರೆ. ಇಲ್ಲಿನ ಶಾಂತಿಯನ್ನು ಕದಡಲು ಬಯಸಿದರೆ ಭಾರತ ಗಡಿದಾಟಿ ಸರ್ಜಿಕಲ್ ದಾಳಿಯ ಮೂಲಕ ಸೂಕ್ತ, ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು. 

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನದ ಉಗ್ರಗಾಮಿಗಳು 'ಜಿಹಾದ್' ಗೆ ಕರೆ ನೀಡಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರು ಉಗ್ರಗಾಮಿಗಳಿಗೆ, ಭಯೋತ್ಪಾದನೆಗೆ ಬೆಂಬಲ ಕೊಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಗಡಿಭಾಗದಲ್ಲಿ ಶಾಂತಿ ಕದಡಿದಂತಾಗಿದೆ. ಈ ಮೂಲಕ ಪಾಕಿಸ್ತಾನ ಪರೋಕ್ಷ ಯುದ್ಧಕ್ಕೆ ಮುಂದಾಗಿದೆ. ಇಂತಹ ಪರೋಕ್ಷ ಯುದ್ಧವೇ ಪಾಕಿಸ್ತಾನದ  ರಾಜನೀತಿಯಾಗಿದೆ ಎಂದು ಅವರು ದೂರಿದರು. 

ಭಾರತ  ಪಾಕಿಸ್ತಾನದ ನಡುವೆ ಯುದ್ಧ ನಡೆದರೆ  ಪರಮಾಣು ಅಸ್ತ್ರ ಬಳಸುವುದಾಗಿ ಪಾಕ್ ಪದೇ ಪದೆ ಹೇಳುತ್ತಿದೆ ಆದರೆ, ಪರಮಾಣು ಅಸ್ತ್ರವಿರುವುದು ದೇಶದ ರಕ್ಷಣೆಗಾಗಿಯೇ ಹೊರತು ಯುದ್ಧ ಮಾಡುವುದಕ್ಕೆ ಅಲ್ಲ ಎಂಬುದನ್ನು  ಸರಿಯಾಗಿ ಅರ್ಥಮಾಡಿಕೊಳ್ಳಲಿ ಎಂದು ಅವರು ಕಿವಿಮಾತು ಹೇಳಿದರು. ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಕಾಶ್ಮೀರದ ಗಡಿಯಲ್ಲಿ ಭಯೋತ್ಪಾದನೆಯ ಉಪಟಳ  ಹೆಚ್ಚಾಗಿದೆ ಎಂಬ ಸತ್ಯವನ್ನು ರಾವತ್  ಒಪ್ಪಿಕೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com