ಡ್ರೋಣ್ ಮೂಲಕ ಶಸ್ತ್ರಾಸ್ತ್ರ ರವಾನೆ: ಎನ್ಐಎ ತನಿಖೆ ಆರಂಭ

ಪಾಕಿಸ್ತಾನ ಉಗ್ರರಿಗೆ ಡ್ರೋಣ್ ಮೂಲಕ ಶಸ್ತ್ರಾಸ್ತ್ರ ರವಾನೆ ಮಾಡುತ್ತಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಕಾ ದಳ (ಎನ್ಐಎ) ತನಿಖೆ ಆರಂಭಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಂಡೀಘಡ: ಪಾಕಿಸ್ತಾನ ಉಗ್ರರಿಗೆ ಡ್ರೋಣ್ ಮೂಲಕ ಶಸ್ತ್ರಾಸ್ತ್ರ ರವಾನೆ ಮಾಡುತ್ತಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಕಾ ದಳ (ಎನ್ಐಎ) ತನಿಖೆ ಆರಂಭಿಸಿದೆ. 

ಪಂಜಾಬ್ ನ ಟಾರನ್ ಜಿಲ್ಲೆಯ ಖಾಲ್ರಾ ಸಮೀಪದ ರಾಜೋಕೆ ಗ್ರಾಮದ ಬಳಿ ಪಾಕಿಸ್ತಾನ ಹಲವು ಡ್ರೋಣ್ ಮೂಲಕ ಎಕೆ 47, ಸೆಟಲೈಟ್ ಫೋನ್ ಹಾಗೂ ಹ್ಯಾಂಡ್ ಗ್ರೆನೇಡ್ಸ್ ಗಳನ್ನು ಬೀಳಿಸುತ್ತಿರುವ ಮಾಹಿತಿಯನ್ನು ಪಂಜಾಬ್ ಪೊಲೀಸರು ಬಹಿರಂಗಗೊಳಿಸಿದ್ದರು. ಗಡಿಯಲ್ಲಿ ಇತ್ತೀಚೆಗೆ ಡ್ರೋಣ್ ಗಳ ಹಾರಾಟ ಹೆ್ಚ್ಚಾಗಿದ್ದು, ಈ ಡ್ರೋಣ್ ಗಳ ಮೂಲಕವೇ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ರವಾನೆ ಮಾಡಲಾಗುತ್ತಿದೆ ಎಂದು ಪೊಲೀಸರು ಆರೋಪಿಸಿದ್ದರು. ಅಲ್ಲದೆ ರಾಜೋಕೆ ಗ್ರಾಮದಲ್ಲಿ ಐದು ಎಕೆ 47, ಸೆಟಲೈಟ್ ಫೋನ್, ಕೈ ಬಾಂಬ್ ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಲ್ಲಿ ತಿಳಿಸಿದ್ದರು.

ಉನ್ನತ ಮಾದರಿಯ ಡ್ರೋಣ್ ಗೆ ಜಿಪಿಎಸ್ ಬಳಸಿಕೊಂಡು ಪಾಕಿಸ್ತಾನ ಉಗ್ರರಿಗೆ ಶಸ್ತ್ರಾಸ್ತ್ರ ನೀಡುವ ತಂತ್ರಕ್ಕೆ ಮೊರೆ ಹೋಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇನ್ನು ಇದೇ ವಿಚಾರವಾಗಿ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಕೂಡ ತನಿಖೆ ನಡೆಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿಕೊಂಡಿದ್ದರು.

ಇದೀಗ ಪ್ರಕರಣದ ತನಿಖಾ ಜವಾಬ್ದಾರಿಯನ್ನು ರಾಷ್ಟ್ಪೀಯ ತನಿಖಾ ದಳ ವಹಿಸಿಕೊಂಡಿದ್ದು, ಇಂದಿನಿಂದ ತನಿಖೆ ಆರಂಭಿಸಿದೆ. ಅದರಂತೆ ಇಂದು ಎನ್ಐಎ ಅಧಿಕಾರಿಗಳ ತಂಡವೊಂದು ಪಂಜಾಬ್ ತಲುಪಿದ್ದು, ತನಿಖೆ ಆರಂಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com