ಗಾಂಧಿ ಪ್ರತಿಮೆ ಕೆಳಗೆ ಎಸ್ಪಿ ಶಾಸಕನ ಕಣ್ಣೀರ ಧಾರೆ!ವಿಡಿಯೋ ವೈರಲ್ 

ಉತ್ತರ ಪ್ರದೇಶದ ಸಂಬಲ್ ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಕುಳಿತ ಸಮಾಜವಾದಿ ಪಕ್ಷದ ಶಾಸಕರೊಬ್ಬರ ಕಣ್ಣೀರ ಧಾರೆಯ ನಾಟಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Published: 03rd October 2019 08:33 PM  |   Last Updated: 03rd October 2019 08:34 PM   |  A+A-


Firozkhan

ಫಿರೋಜ್ ಖಾನ್

Posted By : Nagaraja AB
Source : Online Desk

ಲಖನೌ:  ಉತ್ತರ ಪ್ರದೇಶದ ಸಂಬಲ್ ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಕುಳಿತ ಸಮಾಜವಾದಿ ಪಕ್ಷದ ಶಾಸಕರೊಬ್ಬರ ಕಣ್ಣೀರ ಧಾರೆಯ ನಾಟಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಂದೌಸಿ ಪಟ್ಟಣದ  ಪವಾರ ಚೌಕದಲ್ಲಿನ ಗಾಂಧಿ ಪ್ರತಿಮೆ ಕೆಳಗೆ  ಕುಳಿತ ಶಾಸಕ ಫಿರೋಜ್ ಖಾನ್ ಹಾಗೂ ಇತರ ಪಕ್ಷದ ಮುಖಂಡರು ಬಾಪು ಬಾಪು ಎನ್ನುತ್ತಾ ಅಳುತ್ತಿದ್ದ ದೃಶ್ಯ ವಿಡಿಯೋದಲ್ಲಿತ್ತು. ಶಾಸಕರು ಕರವಸ್ತ್ರದಿಂದ ಮುಖವನ್ನು ಒರೆಸಿಕೊಳ್ಳುತ್ತಾ ಅಳುವ ರೀತಿಯಲ್ಲಿ ನಾಟಕ ಮಾಡಿದ್ದರು. 

 

ಆದರೆ, ತಮ್ಮ ಈ ನಾಟಕವನ್ನು ಫಿರೋಜ್ ಖಾನ್ ಸಮರ್ಥಿಸಿಕೊಂಡಿದ್ದಾರೆ.ಸಮಾಜವಾದಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಹಾತ್ಮ ಗಾಂಧಿ ಪ್ರತಿಮೆಯನ್ನು ಸ್ವಚ್ಛಗೊಳಿಸಲಾಗುತಿತ್ತು. ಆದರೆ, ಬಿಜೆಪಿ ಆಡಳಿತಾವಧಿಯಲ್ಲಿ ಮಹಾತ್ಮನ  ಪ್ರತಿಮೆಯನ್ನು ಕೂಡಾ ಸ್ವಚ್ಛಗೊಳಿಸುತ್ತಿಲ್ಲ. ಅವರ ಜವಾಬ್ದಾರಿಯನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ ಆದ್ದರಿಂದ ತಮ್ಮವರೊಂದಿಗೆ ಪ್ರತಿಮೆ ಸ್ವಚ್ಛಗೊಳಿಸಿದ್ದಾಗಿ ಹೇಳಿದ್ದಾರೆ. 

ಮಹಾತ್ಮ ಗಾಂಧಿಗೆ ಸಣ್ಣ ಗೌರವ ನೀಡದಿದ್ದರೂ ಅವರ ಹೆಸರಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡುತ್ತಿದೆ. ಗಾಂಧೀಜಿ ಅವರ ಪ್ರತಿಮೆಯನ್ನು ಸ್ವಚ್ಛಗೊಳಿಸಿದ್ದೇವೆ. ಆದರೆ, ಬಿಜೆಪಿಯವರು ಇದನ್ನು ನಾಟಕ ಎನ್ನುತ್ತಿದ್ದಾರೆ. ಇಂತರ ತಾರತಮ್ಯವನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp