ಗೃಹ ಬಂಧನದಿಂದ ಕಾಶ್ಮೀರಿ ರಾಜಕಾರಣಿಗಳ ಬಿಡುಗಡೆ

ಜಮ್ಮುವಿನ ಎಲ್ಲಾ ರಾಜಕಾರಣಿಗಳ ಗೃಹ ಬಂಧನವನ್ನು ಜಮ್ಮು- ಕಾಶ್ಮೀರ ಆಡಳಿತ ಬುಧವಾರ ಅಂತ್ಯಗೊಳಿದೆ. ಆದಾಗ್ಯೂ, ಕಾಶ್ಮೀರದಲ್ಲಿನ ಸ್ಥಳೀಯ ಮುಖಂಡರ ಬಿಡುಗಡೆ ಅಥವಾ ಗೃಹ ಬಂಧನ ಇನ್ನೂ ಮುಂದುವರೆದಿದೆ. 
ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ

ಜಮ್ಮು- ಕಾಶ್ಮೀರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ರಾಜಕಾರಣಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದಿದ್ದೆ. 
ಕಾಶ್ಮೀರ ರಾಜಕಾರಣಿಗಳ ಬಿಡುಗಡೆ ಸಂಬಂಧ ಪ್ರತಿಕ್ರಿಯಿಸಿರುವ ಜಮ್ಮು- ಕಾಶ್ಮೀರ ರಾಜ್ಯಪಾಲರ ಸಲಹೆಗಾರ ಫಾರೂಖ್ ಖಾನ್, ಪ್ರತಿಯೊಬ್ಬ ರಾಜಕಾರಣಿಯನ್ನು ಪರಿಶೀಲಿಸಿದ ಬಳಿಕ ಒಬ್ಬರಾದ ನಂತರ ಮತ್ತೊಬ್ಬರನ್ನು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.

ಜಮ್ಮುವಿನ ಎಲ್ಲಾ ರಾಜಕಾರಣಿಗಳ ಗೃಹ ಬಂಧನವನ್ನು ಜಮ್ಮು- ಕಾಶ್ಮೀರ ಆಡಳಿತ ಬುಧವಾರ ಅಂತ್ಯಗೊಳಿದೆ. ಆದಾಗ್ಯೂ, ಕಾಶ್ಮೀರದಲ್ಲಿನ ಸ್ಥಳೀಯ ಮುಖಂಡರ ಬಿಡುಗಡೆ ಅಥವಾ ಗೃಹ ಬಂಧನ ಇನ್ನೂ ಮುಂದುವರೆದಿದೆ. 

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಕಣಿವೆ ರಾಜ್ಯದಲ್ಲಿ ನಿರ್ಬಂಧ ಹೇರಿ ಅಲ್ಲಿನ ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. 

 ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಅಮೆರಿಕಾ, ಚೀನಾ ಮೊದಲಾದ ರಾಷ್ಟ್ರಗಳಿಂದ ಟೀಕೆ ವ್ಯಕ್ತವಾಗಿತ್ತು. ಸಂವಹನ ಜಾಲವನ್ನು ಮರು ಸ್ಥಾಪಿಸುವಂತೆ ಇತ್ತೀಚಿಗೆ ಅಮೆರಿಕಾ ಕಾಂಗ್ರೆಸ್ಸಿನ 13 ಮಂದಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com