ಸೂಕ್ತ ವಿಶ್ಲೇಷಣೆ ಬಳಿಕ ಕಾಶ್ಮೀರಿ ನಾಯಕರ ಬಿಡುಗಡೆ: ರಾಜ್ಯಪಾಲರ ಸಲಹೆಗಾರ

ವಶಕ್ಕೆ ಪಡೆದುಕೊಳ್ಳಲಾಗಿರುವ ಪ್ರತೀಯೊಬ್ಬ ಕಾಶ್ಮೀರಿ ನಾಯಕರನ್ನು ಸೂಕ್ತ ವಿಶ್ಲೇಷಣೆಗಳ ಬಳಿಕ ಬಿಡುಗಡೆ ಮಾಡಲಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಆಡಳಿತ ಮಂಡಳಿ ಗುರುವಾರ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ವಶಕ್ಕೆ ಪಡೆದುಕೊಳ್ಳಲಾಗಿರುವ ಪ್ರತೀಯೊಬ್ಬ ಕಾಶ್ಮೀರಿ ನಾಯಕರನ್ನು ಸೂಕ್ತ ವಿಶ್ಲೇಷಣೆಗಳ ಬಳಿಕ ಬಿಡುಗಡೆ ಮಾಡಲಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಆಡಳಿತ ಮಂಡಳಿ ಗುರುವಾರ ಹೇಳಿದೆ. 

ಕಾಶ್ಮೀರಿ ನಾಯಕರು ಹಾಗೂ ಜಮ್ಮುವಿನ ನಾಯಕರ ವಶಕ್ಕೆ ಪಡೆದುಕೊಂಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲಕ ಸಲಹೆಗಾರ ಫಾರೂಖ್ ಖಾನ್ ಅವರು, ಭರವಸೆ ಇಡಿ, ಒಬ್ಬರ ಕುರಿತು ಸೂಕ್ತ ವಿಶ್ಲೇಷಣೆಗಳ ಬಳಿಕ ಒಬ್ಬರ ನಂತರ ಒಬ್ಬರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

ಈ ಹಿಂದೆ ಜಮ್ಮುವಿನ ಬಿಜೆಪಿಯೇತರ ಪಕ್ಷಗಳು ಹೇಳಿಕೆ ನೀಡಿ, ಕಳೆದ 2 ತಿಂಗಳಿಗೂ ಹೆಚ್ಚು ಕಾಲದಿಂದಲೂ ನಮ್ಮ ಮೇಲೆ ಆಡಳಿತ ಮಂಡಳಿ ನಿಷೇಧ ಹೇರಿದೆ ಎಂದು ಆರೋಪಿಸಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಮ್ಮು ವಿಭಾಗೀಯ ಆಯುಕ್ತ ಸಂಜೀವ್ ವರ್ಮಾ ಅವರು, ಈ ನಾಯಕರನ್ನು ಎಂದಿಗೂ ವಶಕ್ಕೇ ಪಡೆದುಕೊಂಡಿಲ್ಲ. ಹಾಗೆಂದು ಅವರನ್ನು ರಾಜಕೀಯ ಚಟುವಟಿಕೆಗಳಲ್ಲಿ ಮುಕ್ತವಾಗಿ ತೊಡಗಿಕೊಳ್ಳಲು ಬಿಟ್ಟಿಲ್ಲ. ಅವರಿಗೆ ಯಾವುದೇ ರೀತಿಯ ಅಡ್ಡಿಯುಂಟು ಮಾಡಿಲ್ಲ. ಸ್ವಯಂ ಹೇರಿಕೆಯ ನಿರ್ಬಂಧವನ್ನು ಅನುಭವಿಸುತ್ತಿದ್ದಾರೆಂದು ತಿಳಿಸಿದ್ದಾರೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡುವ 370 ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಕಳೆದ 50 ತಿನಗಳಿಂದ ಜಮ್ಮು ಮತ್ತು ಕಾಶ್ಮೀರದ 500ಕ್ಕೂ ಹೆಚ್ಚು ನಾಯಕರು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾದಂತೆ ಗೃಹ ಬಂಧನ ವಿಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com