ಪಿಎಂಸಿ ಬ್ಯಾಂಕ್ ಹಗರಣ: ಮಾಜಿ ಎಂಡಿ ಥಾಮಸ್ ಅ.17ರವರೆಗೆ ಪೋಲೀಸ್ ವಶಕ್ಕೆ

4,355 ಕೋಟಿ ರೂ.ಪಿಎಂಸಿ ಬ್ಯಾಂಕ್ ಹಗರಣ ಸಂಬಂಧಿಸಿ ಬಂಧಿಸಲ್ಪಟ್ಟ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಅವರನ್ನುಅಕ್ಟೋಬರ್ 17 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಶುಕ್ರವಾರ ಥಾಮಸ್ ಬಂಧನವಾಗಿದ್ದು ಶನಿವಾರ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಅವರನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಜಿ ಶೇಖ್ ಅವರ ಮುಂದೆ ಹಾಜರುಪಡಿಸಿತು. ಆತ ಸಹ ಹಗರಣ, ಪಿತೂರಿಯ ಭಾಗವಾಗಿದ್ದು ಆತನ ವಿಚಾರಣೆ ಅಗತ್ಯವಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅದೇ ವೇಳೆ  ಥಾಮಸ್ ಪರ ವಕೀಲರು  ಅವರನ್ನು "ಬಲಿಪಶು" ಯನ್ನಾಗಿ ಮಾಡಲಾಗುತ್ತಿದೆ ಎಂದು ವಾದಿಸಿದರು. ಆದರೆ ನ್ಯಾಯಾಲಯ ಪೋಲೀಸರ ವಾದಕ್ಕೆ ಮನ್ನಣೆ ಕೊಟ್ಟು ಥಾಮಸ್ ಅವರನ್ನು ಅಕ್ಟೋಬರ್ 17 ರವರೆಗೆ ಕಸ್ಟಡಿಗೆ ನೀಡಿದೆ.

ಇನ್ನು ಇದೇ ಪ್ರಕರಣದಲ್ಲಿ ಗುರುವಾರ  ರಿಯಲ್ ಎಸ್ಟೇಟ್ ದೈತ್ಯ ಎಚ್ಡಿಐಎಲ್ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ವಾಧ್ವಾನ್ ಮತ್ತು ಸಾರಂಗ್ ವಾಧ್ವಾನ್ ಅವರನ್ನು ಸಹ ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com