ಉಗ್ರರ ನುಸುಳುವಿಕೆ ನಿಲ್ಲದಿದ್ದರೆ, ಬಾಲಕೋಟ್ ವೈಮಾನಿಕ ದಾಳಿ ಪುನಾರವರ್ತನೆ: ಪಾಕ್'ಗೆ ಎಚ್ಚರಿಕೆ

ಭಾರತ ಗಡಿಯಲ್ಲಿ ಉಗ್ರ ಒಳನುಸುಳುವಿಕೆಯನ್ನು ನಿಲ್ಲಿಸದಿದ್ದರೆ, ಬಾಲಕೋಟ್ ವೈಮಾನಿಕ ದಾಳಿ ಪುನಾರವರ್ತನೆಗೊಳ್ಳಲಿವೆ ಎಂದು ಪಾಕಿಸ್ತಾನಕ್ಕೆ ಭಾರತೀಯ ವಾಯುಪಡೆ ಎಚ್ಚರಿಕೆ ನೀಡಿದೆ. 

ನವದೆಹಲಿ: ಭಾರತ ಗಡಿಯಲ್ಲಿ ಉಗ್ರ ಒಳನುಸುಳುವಿಕೆಯನ್ನು ನಿಲ್ಲಿಸದಿದ್ದರೆ, ಬಾಲಕೋಟ್ ವೈಮಾನಿಕ ದಾಳಿ ಪುನಾರವರ್ತನೆಗೊಳ್ಳಲಿವೆ ಎಂದು ಪಾಕಿಸ್ತಾನಕ್ಕೆ ಭಾರತೀಯ ವಾಯುಪಡೆ ಎಚ್ಚರಿಕೆ ನೀಡಿದೆ. 

ಬಾಲಕೋಟ್ ವೈಮಾನಿಕ ದಾಳಿಯ ಪ್ರೋಮೋ ವಿಡಿಯೋ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿರುವ ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರಕ್ಷುಬ್ದುತೆ ಸೃಷ್ಟಿಸಲು ಪಾಕಿಸ್ತಾನ ಸಂಚು ರೂಪಿಸುತ್ತಿದೆ ಎಂಬ ವರದಿಗಳು ಬಂದಿದ್ದು, ಪಾಕಿಸ್ತಾನ ಯಾವುದೇ ದಾಳಿ ಎದುರಿಸಲು ನಾವು ಸರ್ವ ಸನ್ನದ್ಧರಾಗಿದ್ದೇವೆಂದು ಹೇಳಿದ್ದಾರೆ. 

ಭಾರತದೊಳಗೆ ಪಾಕಿಸ್ತಾನ ತನ್ನ ಉಗ್ರರ ಒಳನುಸುಳುವಿಕೆಯನ್ನು ನಿಲ್ಲಿಸದಿದ್ದರೆ, ಬಾಲಕೋಟ್ ಉಗ್ರರ ತರಬೇತಿ ನೆಲೆಗಳ ಮೇಲೆ ನಡೆಸಲಾದ ವೈಮಾನಿಕ ದಾಳಿಗಳು ಪುನರಾವರ್ತನೆಗೊಳ್ಳಲಿವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ. 

ನಾವು ಮೊದಲು ದಾಳಿ ಮಾಡುವುದಿಲ್ಲ. ಆದರೆ, ಪಾಕಿಸ್ತಾನವೇನಾದರೂ ದಾಳಿ ಮಾಡಿದ್ದೇ ಆದರೆ, ಭಾರತ ಸರ್ಕಾರ ಯಾವುದೇ ಆದೇಶ ನೀಡಿದರೂ ಆ ಪ್ರಕಾರ ಪ್ರತಿಕ್ರಿಯೆ ನೀಡುತ್ತೇವೆ. ಸರ್ಕಾರ ಯಾವ ಗುರಿ ನೀಡಿದರೂ, ಅದರ ಅನುಸಾರ ನಾವು ನಡೆಯಲಿದ್ದೇವೆಂದು ತಿಳಿಸಿದ್ದಾರೆ. 

ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಭಾರತಕ್ಕೆ ಪ್ರವೇಶಿಸಿಲು ಉಗ್ರರು ಸಿದ್ಧರಾಗಿ ನಿಂತಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿವೆ. ಭಾರತೀಯ ಸೇನೆ ಕಟ್ಟೆಚ್ಚರಿಕೆಯ ಸ್ಥಿತಿಯಲ್ಲಿದೆ. ತರಬೇತಿ ಪಡೆದ 4ಸ000 ಉಗ್ರರನ್ನು ಕೇಂದ್ರ ಗುಪ್ತಚರ ತಂಡ ಗುರ್ತಿಸಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪರಿಸರದಲ್ಲಿ ಜಾಗರೂಕರಾಗಿಸಲು ಸೇನೆಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com