ಜಮ್ಮು-ಕಾಶ್ಮೀರ: ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಬೆಳಕು ಕಂಡ ಕುಗ್ರಾಮ!

ಸೌಭಾಗ್ಯ ವಿದ್ಯುದೀಕರಣ ಯೋಜನೆಯಡಿ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಕುಗ್ರಾಮವೊಂದು ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ವಿದ್ಯುತ್ ಸೌಕರ್ಯ ಪಡೆದುಕೊಂಡಿದೆ. 
ಗ್ರಾಮಸ್ಥರು
ಗ್ರಾಮಸ್ಥರು

ರಜೌರಿ: ಸೌಭಾಗ್ಯ ವಿದ್ಯುದೀಕರಣ ಯೋಜನೆಯಡಿ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಕುಗ್ರಾಮವೊಂದು ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ವಿದ್ಯುತ್ ಸೌಕರ್ಯ ಪಡೆದುಕೊಂಡಿದೆ. 

ಈ ಗ್ರಾಮದ 20 ಸಾವಿರ ಮನೆಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿದೆ.ವಿಶೇಷವೆಂದರೆ ಗಡಿ ಹತ್ತಿರ ಇರುವ ಈ ಗ್ರಾಮ ಸ್ವಾತಂತ್ರ್ಯ ನಂತರವೂ ಬೆಳಕನ್ನೆ ಕಂಡಿರಲಿಲ್ಲ.

ಕೇಂದ್ರ ಸರ್ಕಾರ ಸೌಭ್ಯಾಗ್ಯ ಯೋಜನೆಯಡಿ 20 ಸಾವಿರದ 300 ಮನೆಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಿದೆ ಎಂದು ರಜೌರಿ  ಡಿಡಿಸಿ ಮೊಹಮ್ಮದ್ ಐಜಾಜ್ ಅಸಾದ್ ಹೇಳಿದ್ದಾರೆ. 

 ಎಲ್ ಒಸಿ  ಸಮೀಪವಿರುವ ಅನೇಕ ಗ್ರಾಮಗಳಲ್ಲಿ  1947ರಿಂದಲೂ  ವಿದ್ಯುತ್ ಸೌಲಭ್ಯ ಇಲ್ಲದಂತಾಗಿತ್ತು. ಈಗ ವಿದ್ಯುತ್ ಸೌಕರ್ಯ ದೊರೆತಿರುವುದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೂಕಲಕರವಾಗಿದೆ. ಈ ಹಿಂದೆ ವಿದ್ಯುತ್ ಇಲ್ಲದೆ ಕ್ಯಾಂಡಲ್ ಹಾಗೂ ಸೀಮೆಎಣ್ಣೆಯ ದೀಪದ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡಬೇಕಾಗಿತ್ತು ಎಂದು ಖಂಡರಿಯಾದ ಗ್ರಾಮಸ್ಥ ಖದಿಮ್ ಹುಸೈನ್ ಸಂತಸ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಸೌಕರ್ಯದಿಂದ ವ್ಯಾಪಾರ ಚಟುವಟಿಕೆ ಬೆಳವಣಿಗೆಯಾಗಲಿದೆ. ಹೊಸ ಅಂಗಡಿಗಳನ್ನು ತೆರೆಯಬಹುದಾಗಿದೆ. ಈ ಪ್ರದೇಶದಲ್ಲಿ ಎರಡ್ಮೂರು ವಿದ್ಯುತ್ ಕಂಬಗಳನ್ನು ಹಾಕಲಾಗಿದ್ದು, ಮನೆಯಲ್ಲಿಯೇ ಮೊಬೈಲ್ ಪೋನ್ ಗಳ ಚಾರ್ಜಿಂಗ್ ಮಾಡಿಕೊಳ್ಳಲು ಅನುಕೂಲವಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳುವುದಾಗಿ ಅವರು ಹೇಳಿದ್ದಾರೆ.

ಸೆಪ್ಟೆಂಬರ್ 25, 2017ರಂದು ಸೌಭಾಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಯೋಜನೆಯಡಿ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯ ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com