ಇಸ್ರೋ ವಿಜ್ಞಾನಿ ಹತ್ಯೆಗೆ ಸಲಿಂಗಕಾಮ ಕಾರಣ!

 ಹೈದರಾಬಾದ್ ನಲ್ಲಿ ನಡೆದಿದ್ದ ಇಸ್ರೋ ವಿಜ್ಞಾನಿಯ ಹತ್ಯೆಗೆ ಸಲಿಂಗಕಾಮ ಕಾರಣ ಎಂಬ ಮಾಹಿತಿ ಬಹಿರಂಗವಾಗಿದೆ. 

Published: 05th October 2019 02:50 AM  |   Last Updated: 05th October 2019 12:22 PM   |  A+A-


'Money dispute over gay sex led to ISRO scientist's murder'

ಇಸ್ರೋ ವಿಜ್ಞಾನಿ ಹತ್ಯೆಗೆ ಸಲಿಂಗಕಾಮ ಕಾರಣ!

Posted By : Srinivas Rao BV
Source : IANS

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದಿದ್ದ ಇಸ್ರೋ ವಿಜ್ಞಾನಿಯ ಹತ್ಯೆಗೆ ಸಲಿಂಗಕಾಮ ಕಾರಣ ಎಂಬ ಮಾಹಿತಿ ಬಹಿರಂಗವಾಗಿದೆ. 

ಅ.1 ರಂದು ಸುರೇಶ್ ಕುಮಾರ್ ಎಂಬ ವಿಜ್ಞಾನಿಯ ಶವ ಅಮೀರ್ ಪೇಟ್ ನಲ್ಲಿರುವ ತನ್ನ ಫ್ಲ್ಯಾಟ್ ನಲ್ಲಿ ಪತ್ತೆಯಾಗಿತ್ತು. ಈ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರಿಗೆ ಸುಳಿವು ದೊರೆತಿದ್ದು, ಸಲಿಂಗ ಕಾಮ ವಿಜ್ಞಾನಿಯ ಹತ್ಯೆಗೆ ಕಾರಣ ಎಂಬುದು ಬಹಿರಂಗವಾಗಿದೆ. 

ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್ಆರ್ಎಸ್ ಸಿ) ವಿಜ್ಞಾನಿ ಲ್ಯಾಬ್ ಟೆಕ್ನೀಷಿಯನ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ. ಗೇ ಸೆಕ್ಸ್ ನಂತರ ಆತನಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಲ್ಯಾಬ್ ಟೆಕ್ನೀಷಿಯನ್ ವಿಜ್ಞಾನಿ ಎಸ್ ಸುರೇಶ್ ಕುಮಾರ್ ನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

39 ವರ್ಷದ ಲ್ಯಾಬ್ ಟೆಕ್ನೀಷಿಯನ್ ನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಹೇಳಿಕೆಯ ಪ್ರಕಾರ ಬಂಧಿತ ಆರೋಪಿ ಜಂಗಮ ಶ್ರೀನಿವಾಸ್ ವಿಜ್ಞಾನಿಯನ್ನು ಇರಿದು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp