ಮುಂಗಾರಿಗೆ ದೇಶದಾದ್ಯಂತ 1900 ಬಲಿ, 3 ಲಕ್ಷಕ್ಕೂ ಹೆಚ್ಚು ಮನೆ ನಾಶ: ಕೇಂದ್ರ ಗೃಹ ಇಲಾಖೆ

ಪ್ರಸಕ್ತ ಸಾಲಿನ ಮುಂಗಾರು ದೇಶದಾದ್ಯಂತ ಭಾರೀ ದುರಂತವನ್ನೇ ಸೃಷ್ಟಿಸಿದ್ದು, ಸುಮಾರು 1900 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪ್ರಸಕ್ತ ಸಾಲಿನ ಮುಂಗಾರು ದೇಶದಾದ್ಯಂತ ಭಾರೀ ದುರಂತವನ್ನೇ ಸೃಷ್ಟಿಸಿದ್ದು, ಸುಮಾರು 1900 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ. 

22 ರಾಜ್ಯಗಳ 357 ಜಿಲ್ಲೆಗಳ 25 ಲಕ್ಷ ಮಂದಿ ಭಾರೀ ಮಳೆಯಿಂದ ನಿರಾಶ್ರಿತರಾಗಿದ್ದು, 46 ಮಂದಿ ನಾಪತ್ತೆಯಾಗಿದ್ದಾರೆಂದು ತಿಳಿಸಿದೆ. 

ಮಹಾಮಳೆಗೆ ದೇಶದಾದ್ಯಂತ 738 ಮಂದಿ ಗಾಯಗೊಂಡಿದ್ದು, 1874ಮಂದಿ ಸಾವನ್ನಪ್ಪಿದ್ದಾರೆ. 1.09 ಲಕ್ಷ ಮನೆಗಳು ಸಂಪೂರ್ಣ ಹಾನಿಯಾಗಿದ್ದು 2.05 ಲಕ್ಷ ಮನೆಗಳು ಭಾಗಶಃ ಹಾನಿಗೀಡಾಗಿವೆ. 

14.14 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದ್ದು, 20 ಸಾವಿರ ಜಾನುವಾರುಗಳು ಸಾವನ್ನಪ್ಪಿವೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಮಂದಿ ಬಲಿಯಾಗಿದ್ದು, ಒಟ್ಟು 382 ಮಂದಿ ಸಾವನ್ನಪ್ಪಿದ್ದಾರೆ.

ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದ್ದು, 227ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದ 13 ಜಿಲ್ಲೆಗಳ ಮಳೆ ರೌದ್ರಾವತಾರ ತಾಳಿದ್ದು, 106 ಮಂದಿಯನ್ನು ಬಲಿ ಪಡೆದುಕೊಂಡಿದೆ. 14 ಮಂದಿ ಗಾಯಗೊಂಡಿದ್ದು, 3,233 ಕಾಳಜಿ ಕೇಂದ್ರದಲ್ಲಿ 2.48 ಲಕ್ಷ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com