ಮೆಟ್ರೋಗಾಗಿ ಮರಗಳ ಮಾರಣಹೋಮಕ್ಕೆ ಕೇಂದ್ರ ಪರಿಸರ ಸಚಿವರ ಸಮರ್ಥನೆ: ದೆಹಲಿ ಮೆಟ್ರೋ ಉದಾಹರಣೆ!

ಮುಂಬೈನ ಪ್ರಮುಖ ಹಸಿರು ಪ್ರದೇಶವಾಗಿರುವ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಗಾಗಿ ಮರಗಳನ್ನು ಕಡಿಯುವುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್  ಸಮರ್ಥಿಸಿದ್ದಾರೆ. 
ಮೆಟ್ರೋಗಾಗಿ ಮರಗಳ ಮಾರಣಹೋಮಕ್ಕೆ ಕೇಂದ್ರ ಪರಿಸರ ಸಚಿವರ ಸಮರ್ಥನೆ: ದೆಹಲಿ ಮೆಟ್ರೋ ಉದಾಹರಣೆ!
ಮೆಟ್ರೋಗಾಗಿ ಮರಗಳ ಮಾರಣಹೋಮಕ್ಕೆ ಕೇಂದ್ರ ಪರಿಸರ ಸಚಿವರ ಸಮರ್ಥನೆ: ದೆಹಲಿ ಮೆಟ್ರೋ ಉದಾಹರಣೆ!

ನವದೆಹಲಿ: ಮುಂಬೈನ ಪ್ರಮುಖ ಹಸಿರು ಪ್ರದೇಶವಾಗಿರುವ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಗಾಗಿ ಮರಗಳನ್ನು ಕಡಿಯುವುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್  ಸಮರ್ಥಿಸಿದ್ದಾರೆ. 

ಮರಗಳನ್ನು ಕಡಿಯುವುದನ್ನು ವಿರೋಧಿಸಿದ 29 ಪರಿಸರ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಈ ಬೆನ್ನಲ್ಲೇ ಪ್ರಕಾಶ್ ಜಾವ್ಡೇಕರ್ ಪ್ರತಿಕ್ರಿಯೆ ನೀಡಿದ್ದಾರೆ. 

ದೆಹಲಿಯಲ್ಲಿ ಮೊದಲ ಮೆಟ್ರೋ ನಿಲ್ದಾಣ ನಿರ್ಮಾಣವಾದಾಗ 20-25 ಮರಗಳನ್ನು ಕತ್ತರಿಸಲಾಗಿತ್ತು. ಆಗಲೂ ಜನ ಪ್ರತಿಭಟನೆ ನಡೆಸಿದ್ದರು. ಇಂದು ಅದು ವಿಶ್ವದಲ್ಲೇ ಅತ್ಯುತ್ತಮ ಮೆಟ್ರೋ ಆಗಿದೆ. ಮೆಟ್ರೋ ಅಂದು ಕತ್ತರಿಸಿದ್ದ ಒಂದೊಂದು ಮರಕ್ಕೂ ಬದಲಾಗಿ 5 ಮರಗಳನ್ನು ಬೆಳೆಸಿದೆ. ಈಗ 271 ನಿಲ್ದಾಣಗಳಿವೆ. ಇಂದು 30 ಲಕ್ಷ ಜನರು ಮೆಟ್ರೋ ಬಳಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಎರಡೂ ಒಟ್ಟಿಗೆ ನಡೆಯಬೇಕು ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. 

ಕೆಲವು ಹಸಿರು ಕಾರ್ಯಕರ್ತರು ಈ ಪ್ರದೇಶದಲ್ಲಿ 2656 ಮರಗಳನ್ನು ಕಡಿಯುವ ಮುಂಬೈ ಮೆಟ್ರೋ ರೈಲು  ಕಾರ್ಪೊರೇಶನ್ ಲಿಮಿಟೆಡ್  ಕ್ರಮವನ್ನು ತಡೆಯಲು ಕೋರಿ ಹೊಸ ಅರ್ಜಿಯನ್ನು ಸಲ್ಲಿಸಿದ್ದರು. ಮುಂಬೈ ನಗರಾಡಳಿತವು ಮರ ಕಡಿಯಲು ಅನುಮತಿ ನೀಡಿತ್ತು.  ಮರಗಳನ್ನು ಕಡಿಯುವುದಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ಶನಿವಾರ ನಿರಾಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com