ಚಿತ್ರಲೇಖನ: ಏಕತಾ  ಪ್ರತಿಮೆಗೆ  ಭೇಟಿ ಕೊಟ್ಟ ದೇವೇಗೌಡ, ಪ್ರಧಾನಿ ಮೋದಿಯಿಂದ ಪ್ರಶಂಸೆ

ಜರಾತ್‌ನ ಕೆವಡಿಯಾದಲ್ಲಿ ನಿರ್ಮಿಸಿರುವ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಪ್ರತಿಮೆಗೆ ಭೇಟಿ ನೀಡಿ ಗೌರವ ಸಲ್ಲಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ.
ಏಕತಾ ಪ್ರತಿಮೆಯ್ಗೆ ಭೇಟಿ ನೀಡಿದ ದೇವೇಗೌಡ
ಏಕತಾ ಪ್ರತಿಮೆಯ್ಗೆ ಭೇಟಿ ನೀಡಿದ ದೇವೇಗೌಡ

ನವದೆಹಲಿ: ಗುಜರಾತ್‌ನ ಕೆವಡಿಯಾದಲ್ಲಿ ನಿರ್ಮಿಸಿರುವ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಪ್ರತಿಮೆಗೆ ಭೇಟಿ ನೀಡಿ ಗೌರವ ಸಲ್ಲಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ.

ನಮ್ಮ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡಜಿ ಅವರು ಯುನಿಟಿ ಪ್ರತಿಮೆಗೆ ಭೇಟಿ ನೀಡಿರುವುದು ತಮಗೆ ಸಂತಸ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಗುಜರಾತ್‌ನ ಸರ್ದಾರ್ ಸರೋವರ್ ಅಣೆಕಟ್ಟಿನಲ್ಲಿರುವ ಯುನಿಟಿ ಪ್ರತಿಮೆಗೆ ಭೇಟಿ ನೀಡಿದ್ದೆ ಎಂದು ಎಚ್.ಡಿ.ದೇವೇಗೌಡ ಶನಿವಾರ ಟ್ವೀಟ್ ಮಾಡಿದ್ದರು. ಮಾತ್ರವಲ್ಲ ಬೃಹತ್ ಪ್ರತಿಮೆಯ ಮುಂದೆ ನಿಂತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು.

ಗುಜರಾತಿನ ಅಹಮದಾಬಾದ್ ನಿಂದ  200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರದ ಅಣೆಕಟ್ಟಿನ ಬಳಿ ಇರುವ ಸರ್ದಾರ್ ವಲ್ಲಭಬಾಯಿ ಅವರ 182 ಮೀಟರ್ ಎತ್ತರದ ಏಕತಾ ಪ್ರತಿಮೆ ಕಳೆದ ವರ್ಷ ಲೋಕಾರ್ಪಣೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com