ರವಿ ಪ್ರಕಾಶ್
ರವಿ ಪ್ರಕಾಶ್

18 ಕೋಟಿ ರೂ. ವಂಚನೆ ಪ್ರಕರಣ: ಟಿವಿ 9 ಮಾಜಿ ಸಿಇಒ ರವಿ ಪ್ರಕಾಶ್ ಬಂಧನ

ಟಿವಿ 9 ವಾಹಿನಿ ಪ್ರವರ್ತಕ ಸಂಸ್ಥೆಯಾದ ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ (ಎಬಿಸಿಎಲ್)ಯ 18 ಕೋಟಿ ರೂ. ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪದ ಮೇಲೆ  ಬಹುಭಾಷಿಕ ಸುದ್ದಿವಾಹಿನಿ ಟಿವಿ 9 ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿ ಪ್ರಕಾಶ್‌ ಅವರನ್ನು ಇಲ್ಲಿನ ಬಂಜಾರ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್: ಟಿವಿ 9 ವಾಹಿನಿ ಪ್ರವರ್ತಕ ಸಂಸ್ಥೆಯಾದ ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ (ಎಬಿಸಿಎಲ್)ಯ 18 ಕೋಟಿ ರೂ. ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪದ ಮೇಲೆ  ಬಹುಭಾಷಿಕ ಸುದ್ದಿವಾಹಿನಿ ಟಿವಿ 9 ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿ ಪ್ರಕಾಶ್‌ ಅವರನ್ನು ಇಲ್ಲಿನ ಬಂಜಾರ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ. 

ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿ ವಂಚನೆ ಮತ್ತು ಅಪರಾಧ ಉಲ್ಲಂಘನೆ ಸೇರಿದಂತೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತಂತೆ ಎಬಿಸಿಎಲ್‌ನ ಹೊಸ ಆಡಳಿತ ಮಂಡಳಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಎಬಿಸಿಎಲ್‌ನಮಾಜಿ ಮುಖ್ಯ ಹಣಕಾಸು ಅಧಿಕಾರಿ ಎಂ.ಕೆ.ವಿ.ಎನ್ ಮೂರ್ತಿಯನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com