ಫೆ.27ರ ಯಶಸ್ವಿ ಕಾರ್ಯಾಚರಣೆ: ವಿಂಗ್ ಕಮಾಂಡರ್ ಅಭಿನಂದನ್ ತಂಡಕ್ಕೆ ವಾಯುಪಡೆಯ ವಿಶೇಷ  ಪ್ರಶಸ್ತಿ

ಈ ವರ್ಷಾರಂಭದ  ಫೆಬ್ರವರಿ 27 ರಂದು ಪಾಕಿಸ್ತಾನದ ವೈಮಾನಿಕ ದಾಳಿಯನ್ನು ತಡೆದು ಅವರ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ಭಾರತೀಯ ವಾಯುಪಡೆಯ (ಐಎಎಫ್) ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನೊಳಗೊಂಡ....
ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್
ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್

ನವದೆಹಲಿ: ಈ ವರ್ಷಾರಂಭದ  ಫೆಬ್ರವರಿ 27 ರಂದು ಪಾಕಿಸ್ತಾನದ ವೈಮಾನಿಕ ದಾಳಿಯನ್ನು ತಡೆದು ಅವರ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ಭಾರತೀಯ ವಾಯುಪಡೆಯ (ಐಎಎಫ್) ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನೊಳಗೊಂಡ  '51 ಸ್ಕ್ವಾಡ್ರನ್‌ಗೆ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಅವರು ಯುನಿಟ್ ಸಿಟೇಷನ್ (ತಂಡಕ್ಕಾಗಿ ನೀಡುವ ವಿಶೇಷ ಪ್ರಶಸ್ತಿ) ನೀಡಲಿದ್ದಾರೆ.

ಈ ಪ್ರಶಸ್ತಿಯನ್ನು ಅಕ್ಟೋಬರ್ 8 ರಂದು ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಸತೀಶ್ ಪವಾರ್ ಸ್ವೀಕರಿಸಲಿದ್ದಾರೆ.

ಬಾಲಕೋಟ್  ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸಿದಾಗ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮಿಗ್ -21 ಬಳಸಿ ಪಾಕಿಸ್ತಾನದ ದಾಳಿಯನ್ನು ತಡೆದಿದ್ದಲ್ಲದೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ್ದರು ಆ ವೇಳೆ ಪಾಕ್ ನ ಎಫ್ -16 ವಿಮಾನವನ್ನುರುಳಿಸಿದ್ದ ಅಭಿನಂದನ್ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದು ಪಾಕ್ ಸೈನಿಕರಿಂದ ಬಂಧನಕ್ಕೊಳಗಾಗಿದ್ದರು. ಆದರೆ ಭಾರತ ಮತ್ತು ಅಂತರರಾಷ್ಟ್ರೀಯ ಸಮುದಾಯದ ಒತ್ತಡದ ಪರಿಣಾಮ ಅಭಿನಂದನ್ ಅವರನ್ನು ಎರಡು ದಿನಗಳ ನಂತರ ಪಾಕ್ ಸುರಕ್ಷಿತವಾಗಿ ಬಿಡುಗಡೆಗೊಳಿಸಿತ್ತು. 

ಅಭಿನಂದನ್ ಅವರ ಸಾಹಸವನ್ನು ಮೆಚ್ಚಿ 73 ನೇ ಸ್ವಾತಂತ್ರ್ಯ ದಿನದಂದು ಅವರಿಗೆ ದೇಶದ ಮೂರನೇ ಅತ್ಯ್ನ್ನತ ಶೌರ್ಯ ಪ್ರಶಸ್ತಿ ವೀರಚಕ್ರ ನೀಡಿ ಪುರಸ್ಕರಿಸಲಾಗಿತ್ತು.

ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಪಾತ್ರವಹಿಸಿದ್ದ ಸ್ಕ್ವಾಡ್ರನ್ ನಾಯಕ  ಮಿಂಟಿ ಅಗರ್ವಾಲ್ ಅವರ 601 ಸಿಗ್ನಲ್ ಘಟಕಕ್ಕೆ ಸಹ ಇದೇ ಸಮಯದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.ಅಲ್ಲದೆ ಬಾಲಕೋಟ್ ದಾಳಿಯ ವೇಳೆ ಮಿರಾಜ್ 2000 ಯುದ್ಧ ವಿಮಾನವನ್ನು ಮುನ್ನಡೆಸಿದ್ದ  ಒಂಬತ್ತನೇ ಸ್ಕ್ವಾಡ್ರನ್  ಸಹ ಪ್ರಶಸ್ತಿ ಪಟ್ಟಿಯಲ್ಲಿದೆ..  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com