ತೆಲಂಗಾಣದಲ್ಲಿ ಯುದ್ಧ ವಿಮಾನ ಪತನ: ತರಬೇತಿಯಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವು

ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಸುಲ್ತಾನ್ ಪುರ ಗ್ರಾಮದಲ್ಲಿ ಭಾನುವಾರ ಹತ್ತಿಯ ಹೊಲದಲ್ಲಿ ಸೆಸ್ನಾ ವಿಮಾನ ಅಪಘಾತಕ್ಕೀಡಾಗಿದ್ದು,  ಅದರಲ್ಲಿದ್ದ ಇಬ್ಬರು ತರಬೇತಿ ಪೈಲಟ್;ಗಳು ಸಾವನ್ನಪ್ಪಿದ್ದಾರೆ.
ತೆಲಂಗಾಣದಲ್ಲಿ ಯುದ್ಧ ವಿಮಾನ ಪತನ: ತರಬೇತಿಯಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವು
ತೆಲಂಗಾಣದಲ್ಲಿ ಯುದ್ಧ ವಿಮಾನ ಪತನ: ತರಬೇತಿಯಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವು

ಹೈದರಾಬಾದ್: ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಸುಲ್ತಾನ್ ಪುರ ಗ್ರಾಮದಲ್ಲಿ ಭಾನುವಾರ ಹತ್ತಿಯ ಹೊಲದಲ್ಲಿ ಸೆಸ್ನಾ ವಿಮಾನ ಅಪಘಾತಕ್ಕೀಡಾಗಿದ್ದು,  ಅದರಲ್ಲಿದ್ದ ಇಬ್ಬರು ತರಬೇತಿ ಪೈಲಟ್;ಗಳು ಸಾವನ್ನಪ್ಪಿದ್ದಾರೆ.

ವಿಮಾನ ನಿಲ್ದಾಣದಿಂದ ಬೆಳಗ್ಗೆ 1155ರ ನಂತರ ವಿಮಾನ ರೇಡಾರ್;ನಿಂದ ಸಂಪರ್ಕ ಕಡಿತಗೊಂಡಿದೆ. ತರಬೇತಿಯ ಭಾಗವಾಗಿ ಅವರು ಬೆಗುಂಪೇಟೆ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭಿಸಿದ್ದರು. ಮೃತರಲ್ಲಿ ಓರ್ವ ತರಬೇತಿ ಪೈಲಟ್ ಅನ್ನು ಇಲ್ಲಿನ ರಾಜೀವ್ ಗಾಂಧಿ ಏವಿಯೇಷನ್ ಅಕಾಡೆಮಿಯ ವಿದ್ಯಾರ್ಥಿ ಪ್ರಕಾಶ್ ವಿಶಾಲ್ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೊಬ್ಬರ ಹೆಸರು ಇನ್ನಷ್ಟೇ ತಿಳಿದುಬರಬೇಕಿದೆ. ದುರಂತ ಸಂಭವಿಸಿದ ತಕ್ಷಣ ಸ್ಥಳಕ್ಕೆ ವಿಕಾರಾಬಾದ್ ಪೊಲೀಸರು ಆಗಮಿಸಿ, ವಿಮಾನಗಳ ಅವಶೇಷಗಳಡಿಯಿಂದ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ದುರಂತ ಸಂಭವಿಸಿದ ಸ್ಥಳಕ್ಕೆ ನಾಗರಿಕ ವಿಮಾನಯಾನ ಇಲಾಖೆಯ ತಂಡವೊಂದು ಬೆಗುಂಪೇಟೆ ವಿಮಾನ ನಿಲ್ದಾಣದಿಂದ ತೆರಳಿದೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ದುರಂತ ನಡೆದ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com