ಕಾಶ್ಮೀರದಲ್ಲಿ ಪೊಲೀಸರ ಮಾರಣಹೋಮಕ್ಕೆ ಭಾರೀ ಸಂಚು: ಒಗ್ಗೂಡಿದ ಪಾಕ್ ಬೆಂಬಲಿತ 3 ಉಗ್ರ ಸಂಘಟನೆಗಳು!

ಕಾಶ್ಮೀರದಲ್ಲಿ ಪೊಲೀಸರ ಮಾರಣಹೋಮಕ್ಕೆ ಭಾರೀ ಸಂಚು ರೂಪಿಸಿಸುವ ಪಾಕಿಸ್ತಾನ, ವಿಧ್ವಂಸಕ ಕೃತ್ಯಕ್ಕೆ ವೆಸಗಲು ಮೂರು ಉಗ್ರ ಸಂಘಟನೆಗಳಿಗೆ ಜವಾಬ್ದಾರಿಗಳನ್ನು ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಾಶ್ಮೀರದಲ್ಲಿ ಪೊಲೀಸರ ಮಾರಣಹೋಮಕ್ಕೆ ಭಾರೀ ಸಂಚು ರೂಪಿಸಿಸುವ ಪಾಕಿಸ್ತಾನ, ವಿಧ್ವಂಸಕ ಕೃತ್ಯಕ್ಕೆ ವೆಸಗಲು ಮೂರು ಉಗ್ರ ಸಂಘಟನೆಗಳಿಗೆ ಜವಾಬ್ದಾರಿಗಳನ್ನು ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಕಾಶ್ಮೀರದಲ್ಲಿ ವಿಧ್ವಸಂಕ ಕೃತ್ಯವೆಸಗಲು ಪಾಕಿಸ್ತಾನ ಸೇನೆ ಹಾಗೂ ಐಎಸ್ಐ ಬೆಂಬಲಿತ ಮೂರು ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ, ಹಿಜ್ಬುಲ್ ಮುಜಾಹಿದ್ದೀನ್ ಹಾಗೂ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗಳು ಒಗ್ಗೂಡಿದ್ದು, ಭಾರೀ ಸಂಚು ರೂಪಿಸಿವೆ ಎಂದು ವರದಿಗಳು ತಿಳಿಸಿವೆ. 

ಕಾಶ್ಮೀರದಲ್ಲಿ ಪೊಲೀಸರನ್ನು ಹತ್ಯೆ ಮಾಡುವ ಸಂಬಂಧ ಈಗಾಗಲೇ ಹೊಂಚು ಹಾಕಿರುವ ಮೂರು ಉಗ್ರ ಸಂಘಟನೆಗಳು ಕಳೆದ ವಾರ ಪುಲ್ವಾಮದಲ್ಲಿ ರಹಸ್ಯ ಸಭೆ ನಡೆಸಿದೆ. ಸಭೆಯಲ್ಲಿ ದಾಳಿ ಕುರಿತು ಮೂರು ಸಂಘಟನೆಗಳು ಜವಾಬ್ದಾರಿಗಳನ್ನು ಹೊತ್ತುಕೊಂಡಿವೆ ಎಂದು ಹೇಳಲಾಗುತ್ತಿದೆ. 

ಉಗ್ರರ ಸಂಘಟನೆಗಳು ಒಗ್ಗೂಡಿ ಭಾರೀ ಸಂಚು ರೂಪಿಸಿರುವ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಭಾರೀ ಕಟ್ಟೆಚ್ಚರದಿಂದ ಇರುವಂತೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ವರದಿಗಳು ತಿಳಿಸಿವೆ. 

ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸಲು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಜವಾಬ್ದಾರಿ ನೀಡಲಾಗಿದ್ದು, ಆಂತರಿಕ ಭದ್ರತೆ ನಾಶಪಡಿಸಲು ಎಲ್ಇಟಿಗೆ ಜವಾಬ್ದಾರಿ ನೀಡಲಾಗಿದೆ. ಇದರಂತೆ ಪೊಲೀಸರು ಹಾಗೂ ರಾಜಕೀಯ ನಾಯಕರ ಹತ್ಯೆಗೆ ಹಿಜ್ಬುಲ್ ಮುಜಾಹಿದ್ದೀನ್'ಗೆ ಜವಾಬ್ದಾರಿ ನೀಡಲಾಗಿದೆ. ಇದಲ್ಲದೆ, ಜನ ಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಲು ಹಿಜ್ಬುಲ್ಗೆ ಜವಾಬ್ದಾರಿ ನೀಡಲಾಗಿದೆ. ಕಾಶ್ಮೀರದಲ್ಲಿ ಯಾವುದೇ ಧನಾತ್ಮಕ ಬೆಳವಣಿಗೆಗಳು ಕಂಡು ಬಂದ ಕೂಡಲೇ ದಾಳಿ ನಡೆಸಲುವಂತೆ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com