ಕಾಳಧನದ ವಿರುದ್ಧ ಹೋರಾಟದಲ್ಲಿ ಮೈಲಿಗಲ್ಲು! ಸ್ವಿಸ್​ ಬ್ಯಾಂಕ್ ಭಾರತೀಯ ಖಾತೆದಾರರ ಮೊದಲ ಪಟ್ಟಿ ಲಭ್ಯ

ಭಾರತ-ಸ್ವಿಡ್ಜರ್ಲ್ಯಾಂಡ್ ಹೊಸ ಒಪ್ಪಂದದಡಿಯಲ್ಲಿ  ಭಾರತವು ತನ್ನ ಪ್ರಜೆಗಳ ಸ್ವಿಸ್ ಬ್ಯಾಂಕ್ ಖಾತೆ ವಿವರಗಳನ್ನು ಮೊದಲ ಬಾರಿಗೆ ಪಡೆದುಕೊಂಡಿದೆ, ಇದು ವಿದೇಶದಲ್ಲಿ ಸಂಗ್ರಹವಾಗಿರುವ ಕಪ್ಪು ಹಣದ ವಿರುದ್ಧದ ಸರ್ಕಾರದ ಹೋರಾಟದ ಪ್ರಮುಖ ಮೈಲಿಗಲ್ಲಿನಲ್ಲಿ ಒಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತ-ಸ್ವಿಡ್ಜರ್ಲ್ಯಾಂಡ್ ಹೊಸ ಒಪ್ಪಂದದಡಿಯಲ್ಲಿ  ಭಾರತವು ತನ್ನ ಪ್ರಜೆಗಳ ಸ್ವಿಸ್ ಬ್ಯಾಂಕ್ ಖಾತೆ ವಿವರಗಳನ್ನು ಮೊದಲ ಬಾರಿಗೆ ಪಡೆದುಕೊಂಡಿದೆ, ಇದು ವಿದೇಶದಲ್ಲಿ ಸಂಗ್ರಹವಾಗಿರುವ ಕಪ್ಪು ಹಣದ ವಿರುದ್ಧದ ಸರ್ಕಾರದ ಹೋರಾಟದ ಪ್ರಮುಖ ಮೈಲಿಗಲ್ಲಿನಲ್ಲಿ ಒಂದಾಗಿದೆ.

ಎಇಒಐನಲ್ಲಿ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಸ್ವಿಡ್ಜರ್ಲ್ಯಾಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್‌ಟಿಎ) ಹಣಕಾಸು ಖಾತೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡ 75 ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಎಫ್‌ಟಿಎ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ. ಮುಂದಿನ ಮಾಹಿತಿ ವಿನಿಮಯವು  ಸೆಪ್ಟೆಂಬರ್ 2020 ರಲ್ಲಿ ನಡೆಯಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಎಇಒಐ ಚೌಕಟ್ಟಿನಡಿಯಲ್ಲಿ ಭಾರತವು ಮೊದಲ ಬಾರಿಗೆ ಸ್ವಿಸ್ ಅಧಿಕಾರಿಗಳಿಂದ ವಿವರಗಳನ್ನು ಪಡೆದುಕೊಂಡಿದೆ, ಇದು ಹಣಕಾಸು ಖಾತೆಗಳ ಮಾಹಿತಿ ವಿನಿಮಯವಾಗಿರಲಿದ್ದು  2018 ರಲ್ಲಿ ರದ್ದಾದ ಖಾತೆಗಳ ಮಾಹಿತಿ ಸಹ ಇವುಗಳ್ ಜತೆಗೆ ಲಭ್ಯವಾಗಲಿದೆ.

ಅದಾಗ್ಯೂ ಇತರೆ ದೇಶಗಳೊಡನೆ ಹಂಚಿಕೊಂಡ ಮಾಹಿತಿಯು ಅತ್ಯಂತ ಗೌಪ್ಯ ವಿಚಾರವೆಂದು ಪರಿಗಣಿಸಿರುವ ಎಫ್‌ಟಿಎ ನಿರ್ದಿಷ್ಟ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದೆ.ಒಟ್ಟಾರೆಯಾಗಿ,ಎಫ್‌ಟಿಎ  3.1 ಮಿಲಿಯನ್ ಹಣಕಾಸು ಖಾತೆಗಳ ಮಾಹಿತಿಯನ್ನು ಪಾಲುದಾರ ರಾಜ್ಯಗಳಿಗೆ ಕಳುಹಿಸಿದೆ ಮತ್ತು ಅವರಿಂದ ಸುಮಾರು 2.4 ಮಿಲಿಯನ್ ಮಾಹಿತಿಯನ್ನು ಪಡೆದುಕೊಂಡಿದೆ. ವಿನಿಮಯವಾದ ವಿವರಗಳಲ್ಲಿ ಗುರುತು (ಐಡೆಂಟಿಫಿಕೇಷನ್) ಖಾತೆ ಮತ್ತು ಹಣಕಾಸಿನ ಮಾಹಿತಿ ಸೇರಿವೆ.ಇವುಗಳಲ್ಲಿ ಹೆಸರು, ವಿಳಾಸ, ವಾಸದ ಸ್ಥಿತಿ ಮತ್ತು ತೆರಿಗೆ ಗುರುತಿನ ಸಂಖ್ಯೆ, ಜೊತೆಗೆ ಹಣಕಾಸು ಸಂಸ್ಥೆ, ಖಾತೆ ಬಾಕಿ ಮತ್ತು ಬಂಡವಾಳ ಆದಾಯಕ್ಕೆ ಸಂಬಂಧಿಸಿದ ಮಾಹಿತಿಗಳು ಸೇರಿವೆ ಎಂದು ಹೇಳಲಾಗಿದೆ.

ಪ್ರತ್ಯೇಕವಾಗಿ, ಈ ವರ್ಷ ಎಇಒಐ (ಸ್ವಯಂಚಾಲಿತ ಮಾಹಿತಿ ವಿನಿಮಯ) ನಡೆದ ದೇಶಗಳ ಸಂಖ್ಯೆ 75 ಆಗಿದ್ದು ಅವುಗಳಲ್ಲಿ 63 ದೇಶಗಳೊಂದಿಗೆ ಪರಸ್ಪರ ಸಂಬಂಧವಿದೆ ಎಂದು ಸ್ವಿಸ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com