ಭಾರತೀಯ ವಾಯುಪಡೆಗೆ ವಿಶ್ವದಲ್ಲಿ ನಾಲ್ಕನೇ ಸ್ಥಾನ

ಭಾರತೀಯ ವಾಯುಪಡೆಗೆ ವಿಶ್ವದಲ್ಲಿಯೇ ನಾಲ್ಕನೇ ಸ್ಥಾನವಿದೆ. ಅಮೆರಿಕ, ಚೀನಾ  ಮತ್ತು ರಷ್ಯಾದ ನಂತರದ ಸ್ಥಾನ ಪಡೆದುಕೊಂಡಿರುವ  ಭಾರತೀಯ ವಾಯುಪಡೆಗೆ   ಈಗ 87ರ ಸಂಭ್ರಮ. 

Published: 07th October 2019 01:04 PM  |   Last Updated: 07th October 2019 01:10 PM   |  A+A-


IAF

ಭಾರತೀಯ ವಾಯುಪಡೆ

Posted By : Nagaraja AB
Source : UNI

ನವದೆಹಲಿ: ಭಾರತೀಯ ವಾಯುಪಡೆಗೆ ವಿಶ್ವದಲ್ಲಿಯೇ ನಾಲ್ಕನೇ ಸ್ಥಾನವಿದೆ. ಅಮೆರಿಕ, ಚೀನಾ  ಮತ್ತು ರಷ್ಯಾದ ನಂತರದ ಸ್ಥಾನ ಪಡೆದುಕೊಂಡಿರುವ  ಭಾರತೀಯ ವಾಯುಪಡೆಗೆ   ಈಗ 87ರ ಸಂಭ್ರಮ. 

1932ರ ಅಕ್ಟೋಬರ್‌ 8ರಂದು ಸ್ಥಾಪನೆಯಾದ ವಾಯುಪಡೆ ಅನೇಕ ಏಳುಬೀಳುಗಳ ನಡುವೆ  ಜಗತ್ತಿನ ಪ್ರಮುಖ  ಶಕ್ತಿಶಾಲಿ ಸಶಸ್ತ್ರ ಪಡೆಯಾಗಿ ರೂಪುಗೊಂಡಿದೆ.

ಭಾರತದಲ್ಲಿ ವಾಯುಪಡೆಯನ್ನು ಬ್ರಿಟಿಷರು ಸ್ಥಾಪಿಸಿದ್ದು, 1932 ಅಕ್ಟೋಬರ್ 8 ರಂದು ಆರಂಭವಾಗಿತ್ತು.ಬಳಿಕ  1933 ಏ .1ರಂದು ಮೊದಲ ಯುದ್ಧ ವಿಮಾನ ವಾಯು ಪಡೆಗೆ ಸೇರ್ಪಡೆಯಾಗಿತ್ತು.  

ಆಗ ವಾಯುಪಡೆಯನ್ನು ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌ ಎಂದು ಕರೆಯಲಾಗುತ್ತಿತ್ತು  ಸ್ವಾತಂತ್ರ್ಯದ ನಂತರ ಇದನ್ನು ಭಾರತೀಯ ವಾಯುಪಡೆ  ಎಂದು ಬದಲಾವಣೆ ಮಾಡಲಾಯಿತು .

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp