ರಾಜಕೀಯದಿಂದ ನಿವೃತ್ತಿ ಇಲ್ಲ- ಉದ್ದವ್ ಠಾಕ್ರೆ 

 ಅದಿತ್ಯ ಠಾಕ್ರೆ ರಾಜಕೀಯ ಪ್ರವೇಶದೊಂದಿಗೆ ತಾನೂ ನಿವೃತ್ತಿಯಾಗುತ್ತೇನೆ ಎಂಬ ಅರ್ಥವಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿದ್ದು, ಒಂದಲ್ಲಾ ಒಂದು ದಿನ ಶಿವಸೇನಾ ಕಾರ್ಯಕರ್ತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಅದಿತ್ಯ, ಉದ್ದವ್ ಠಾಕ್ರೆ
ಅದಿತ್ಯ, ಉದ್ದವ್ ಠಾಕ್ರೆ

ಮುಂಬೈ:  ಅದಿತ್ಯ ಠಾಕ್ರೆ ರಾಜಕೀಯ ಪ್ರವೇಶದೊಂದಿಗೆ ತಾನೂ ನಿವೃತ್ತಿಯಾಗುತ್ತೇನೆ ಎಂಬ ಅರ್ಥವಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿದ್ದು, ಒಂದಲ್ಲಾ ಒಂದು ದಿನ ಶಿವಸೇನಾ ಕಾರ್ಯಕರ್ತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

 2014 ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಿವಸೇನೆ ಮೋದಿ ಅಲೆ ಬಗ್ಗೆ ಪರಿಶೀಲನೆ ನಡೆಸಿತ್ತು. ಆದರೆ, ಆ ಸಮಯದಲ್ಲಿ ಏಕೆ ಬಿಜೆಪಿ ಜೊತೆಗೆ ಕೈ ಜೋಡಿಸಲಿಲ್ಲ ಎಂಬ ಚರ್ಚೆಗೆ ಅರ್ಥವಿಲ್ಲ. ಈ ಬಾರಿ  288 ಕ್ಷೇತ್ರಗಳ ಪೈಕಿ 124 ಸ್ಥಾನಗಳಲ್ಲಿ ಶಿವಸೇನಾ ಸ್ಪರ್ಧಿಸಿದೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಅವರು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ತಿಳಿಸಿದ್ದಾರೆ. 

ಶಿವಸೇನಾ ಸ್ಥಾಪಕ, ತಮ್ಮ ತಂದೆ  ದಿವಂಗತ ಬಾಳಾ ಸಾಹೇಬ್ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಒಂದಲ್ಲಾ ಒಂದು ದಿನ ಶಿವಸೇನೆಯ ಕಾರ್ಯಕರ್ತರೊಬ್ಬರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. 

ಉದ್ದವ್ ಠಾಕ್ರೆ ಪುತ್ರ ಅದಿತ್ಯ ಠಾಕ್ರೆ ಮುಂಬೈಯ ವೊರ್ಲಿ ಕ್ಷೇತ್ರದಿಂದ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com