87ನೇ ವಾಯುಸೇನಾ ದಿನ: ದೇಶದ ಹೆಮ್ಮೆಯ ಪ್ರತೀಕ, ವೀರ ಯೋಧರಿಗೆ ಗೌರವ

ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡುವ, ದೇಶದ ಹೆಮ್ಮೆಯ ಪ್ರತೀಕವಾಗಿರುವ ವಾಯುಪಡೆಯ ವೀರ ಯೋಧರಿಗೆ ಮೂರು ಸೇನಗಳ ಮುಖ್ಯಸ್ಥರು ಮಂಗಳವಾರ ಗೌರವ ಸಲ್ಲಿಸಿದ್ದಾರೆ.
87ನೇ ವಾಯುಸೇನಾ ದಿನ: ದೇಶದ ಹೆಮ್ಮೆಯ ಪ್ರತೀಕ, ವೀರ ಯೋಧರಿಗೆ ಗೌರವ
87ನೇ ವಾಯುಸೇನಾ ದಿನ: ದೇಶದ ಹೆಮ್ಮೆಯ ಪ್ರತೀಕ, ವೀರ ಯೋಧರಿಗೆ ಗೌರವ

ನವದೆಹಲಿ: ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡುವ, ದೇಶದ ಹೆಮ್ಮೆಯ ಪ್ರತೀಕವಾಗಿರುವ ವಾಯುಪಡೆಯ ವೀರ ಯೋಧರಿಗೆ ಮೂರು ಸೇನಗಳ ಮುಖ್ಯಸ್ಥರು ಮಂಗಳವಾರ ಗೌರವ ಸಲ್ಲಿಸಿದ್ದಾರೆ. 

ಕರಂಬಬೀರ್ ಸಿಂಗ್ ರಾಷ್ಟ್ರೀಯ ಯುದ್ಧ ಸ್ಮಾರಕ್ಕೆ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್, ವಾಯುಸೇನೆ ಮುಖ್ಯಸ್ಥ ಆರ್.ಕೆಎಸ್ ಭದೌರಿಯಾ ಮತ್ತು ನೌಕಾಪಡೆ ಮುಖ್ಯಸ್ಥ ಕರಂಬೀರ್ ಸಿಂಗ್ ಅವರು, ಪುಷ್ಪಾರ್ಚನೆ ನಡೆಸುವ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಿದರು. 

1932 ಅ.8 ರಂದು ಭಾರತೀಯ ವಾಯುಪಡೆಯನ್ನು ಅಧಿಕೃತವಾಗಿ ಬ್ರಿಟೀಷರು ಸ್ಥಾಪಿಸಿದ್ದರು. ವಾಯುಪಡೆಗೆ ಸಿಬ್ಬಂದಿ ಮತ್ತು ವಿಮಾನ ಪೂರೈಸುವುದು ಐಎಎಫ್'ನ ಮುಖ್ಯ ಉದ್ದೇಶವಾಗಿದ್ದು. ರಾಷ್ಟ್ರದ ವಾಯುಪಡೆ 1950ರಿಂದ ನೆರೆಯ ಪಾಕಿಸ್ತಾನ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದೊಂದಿಗೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದೆ. ಆಪರೇಷನ್ ವಿಜಯ್, ಆಪರೇಷನ್ ಮೇಘದೂತ್, ಆಪರೇಷನ್ ಕ್ಯಾಕ್ಟಸ್ ಮತ್ತು ಆಪರೇಷನ್ ಪೂಮಲೈ ಐಎಎಫ್ ಕೈಗೊಂಡ ಪ್ರಮುಖ ಕಾರ್ಯಾಚರಣೆಗಳಾಗಿವೆ. ಅಲ್ಲದೆ, ವಾಯುಸೇನೆ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲೂ ಭಾಗವಹಿಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com