ವಾಯುಸೇನಾ ದಿನ: ಮಿಗ್-21ನಲ್ಲಿ ಸಾಹಸ ಪ್ರದರ್ಶಿಸಿದ ವಿಂಗ್ ಕಮಾಂಡರ್ ಅಭಿನಂದನ್

ಫೆಬ್ರವರಿಯಲ್ಲಿ ನಡೆದಿದ್ದ ಬಾಲಕೋಟ್ ದಾಳಿ ವೇಳೆ ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಹಾಗೂ ಅವರ ತಂಡ ಮಂಗಳವಾರ  ಹಿಂಡನ್ ವಾಯುನೆಲೆಯಲ್ಲಿ ನಡೆದ ವಾಯುಪಡೆಯ ದಿನದ ಮೆರವಣಿಗೆಯಲ್ಲಿ....

Published: 08th October 2019 11:57 AM  |   Last Updated: 08th October 2019 12:54 PM   |  A+A-


ಮಿಗ್-21ನಲ್ಲಿ ಸಾಹಸ ಪ್ರದರ್ಶಿಸಿದ ವಿಂಗ್ ಕಮಾಂಡರ್ ಅಭಿನಂದನ್

Posted By : Raghavendra Adiga
Source : ANI

ಫೆಬ್ರವರಿಯಲ್ಲಿ ನಡೆದಿದ್ದ ಬಾಲಕೋಟ್ ದಾಳಿ ವೇಳೆ ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಹಾಗೂ ಅವರ ತಂಡ ಮಂಗಳವಾರ  ಹಿಂಡನ್ ವಾಯುನೆಲೆಯಲ್ಲಿ ನಡೆದ ವಾಯುಪಡೆಯ ದಿನದ ಮೆರವಣಿಗೆಯಲ್ಲಿ ಮಿಗ್ -21 ಬಿಸಾನ್ ವಿಮಾನವನ್ನು ಚಲಾಯಿಸಿದ್ದಾರೆ. 'ಎವೆಂಜರ್ ಫಾರ್ಮೇಷನ್ ನಲ್ಲಿ  ಮೂರು ಮಿರಾಜ್ 2000 ವಿಮಾನಗಳು ಮತ್ತು ಎರಡು ಎಸ್ ಯು -30 ಎಂಕೆಐ ಯುದ್ಧ ವಿಮಾನಗಳು ಹಾರಾಟ ನಡೆಸಿವೆ.

ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಭಾಗವಹಿಸಿದ ಪೈಲಟ್‌ಗಳು ವಿಮಾನಗಳನ್ನು ಚಲಾಯಿಸುತ್ತಿದ್ದಾರೆ. ಫೆ.26, 27ರ ದಾಳಿ ಹಾಗೂ ಬಾಲಕೋಟ್ ಘಟನೆಯಲ್ಲಿ ಪಾಲ್ಗೊಂಡ ಪೈಲಟ್ ಗಳನ್ನು ಗೌರವಿಸುವ ಸಲುವಾಗಿ  ವಾಯುದಾಳಿಯಲ್ಲಿ ಭಾಗವಹಿಸಿದ ಏರ್ ಫೈಟರ್ ಪೈಲಟ್‌ಗಳನ್ನು ಮೆರವಣಿಗೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.

 

 

ಭಾರತೀಯ ವಾಯುಪಡೆಯು ತನ್ನ 87ನೇ ವಾರ್ಷಿಕ ದಿನಾಚರಣೆಯನ್ನು ಮಂಗಳವಾರ (ಇಂದು) ಆಚರಿಸಿಕೊಳ್ಳುತ್ತಿದೆ.ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ಈ ಕುರಿತ ಮುಖ್ಯ ಕಾರ್ಯಕ್ರಮ ಆಯೋಜನೆಯಾಗಿದೆ.ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಐಎಎಫ್ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ  ಉಪಸ್ಥಿತರಿದ್ದರು

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp