ಆಗಸದಲ್ಲಿ ಐಎಎಫ್ ದೇಶವನ್ನು ದಿಟ್ಟ, ಬದ್ಧತೆಯಿಂದ ಕಾಪಾಡುತ್ತದೆ: ರಾಷ್ಟ್ರಪತಿ ಕೋವಿಂದ್

ಭಾರತೀಯ ವಾಯುಸೇನೆ ದೇಶವನ್ನು ದಿಟ್ಟ ಹಾಗೂ ಬದ್ಧತೆಯಿಂದ ರಕ್ಷಣೆ ಮಾಡುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಹೇಳಿದ್ದಾರೆ. 
ರಾಷ್ಟ್ರಪತಿ ರಾಮನಾಥ್ ಕೋವಿಂದ್
ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ: ಭಾರತೀಯ ವಾಯುಸೇನೆ ದೇಶವನ್ನು ದಿಟ್ಟ ಹಾಗೂ ಬದ್ಧತೆಯಿಂದ ರಕ್ಷಣೆ ಮಾಡುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಹೇಳಿದ್ದಾರೆ. 

ವಾಯುಪಡೆ ದಿನವಾದ ಇಂದು ನಮ್ಮ ವೀರ ವಾಯುಪಡೆಗಳು, ಅನುಭವಿಗಳು ಹಾಗೂ ಭಾರತೀಯ ವಾಯುಪಡೆಯ ಕುಟುಂಬಸ್ಥರನ್ನು ಹೆಮ್ಮೆಯಿಂದ ಗೌರವಿಸುತ್ತೇವೆ. ಆಗಸದಲ್ಲಿಯೂ ನಮ್ಮ ದೇಶವನ್ನು ದಿಟ್ಟ ಹಾಗೂ ಬದ್ಧತೆಯಿಂದ ಕಾಯುತ್ತದೆ. ತಮ್ಮ ನಿಸ್ವಾರ್ಥ ಕಾರ್ಯ ಹಾಗೂ ತ್ಯಾಗ ಮಾಡುವ ವಾಯುಪಡೆಯನ್ನು ಭಾರತ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ. 

1932 ಅ.8 ರಂದು ಭಾರತೀಯ ವಾಯುಪಡೆಯನ್ನು ಅಧಿಕೃತವಾಗಿ ಬ್ರಿಟೀಷರು ಸ್ಥಾಪಿಸಿದ್ದರು. ವಾಯುಪಡೆಗೆ ಸಿಬ್ಬಂದಿ ಮತ್ತು ವಿಮಾನ ಪೂರೈಸುವುದು ಐಎಎಫ್'ನ ಮುಖ್ಯ ಉದ್ದೇಶವಾಗಿದ್ದು. ರಾಷ್ಟ್ರದ ವಾಯುಪಡೆ 1950ರಿಂದ ನೆರೆಯ ಪಾಕಿಸ್ತಾನ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದೊಂದಿಗೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದೆ. ಆಪರೇಷನ್ ವಿಜಯ್, ಆಪರೇಷನ್ ಮೇಘದೂತ್, ಆಪರೇಷನ್ ಕ್ಯಾಕ್ಟಸ್ ಮತ್ತು ಆಪರೇಷನ್ ಪೂಮಲೈ ಐಎಎಫ್ ಕೈಗೊಂಡ ಪ್ರಮುಖ ಕಾರ್ಯಾಚರಣೆಗಳಾಗಿವೆ. ಅಲ್ಲದೆ, ವಾಯುಸೇನೆ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲೂ ಭಾಗವಹಿಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com