ವಿಜಯದಶಮಿಯಂದೇ ಭಾರತಕ್ಕೆ'ರಫೇಲ್: ಯುದ್ಧ ವಿಮಾನಕ್ಕೆ ರಾಜನಾಥ್ ಸಿಂಗ್ ಆಯುಧ ಪೂಜೆ

ಬಹುನಿರೀಕ್ಷಿತ 36 ರಫೇಲ್  ಯುದ್ದ ವಿಮಾನವನ್ನು ಫ್ರಾನ್ಸ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಬಹು ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಚರ್ಚಿಸಿದ ಬಳಿಕ   36 ರಫೇಲ್ ಯುದ್ಧ ವಿಮಾನಗಳ ಪೈಕಿ ಒಂದನ್ನು ಔಪಚಾರಿಕವಾಗಿ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.
ರಕ್ಷಣಾ ಸಚಿವರು, ರಫೇಲ್
ರಕ್ಷಣಾ ಸಚಿವರು, ರಫೇಲ್

ನವದೆಹಲಿ:ಬಹುನಿರೀಕ್ಷಿತ 36 ರಫೇಲ್ ಯುದ್ದ ವಿಮಾನವನ್ನು ಫ್ರಾನ್ಸ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ.ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಬಹು ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಚರ್ಚಿಸಿದ ಬಳಿಕ   36 ರಫೇಲ್ ಯುದ್ಧ ವಿಮಾನಗಳ ಪೈಕಿ ಒಂದನ್ನು ಔಪಚಾರಿಕವಾಗಿ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.

ಫ್ಯಾರಿಸ್ ನ ಮೆರಿಗ್ನಾಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಡಸಾಲ್ಟ್ ಕಂಪನಿ ಸಿಇಓ ಎರಿಕ್ ಟ್ರಾಪಿಯರ್  ರಫೇಲ್ ಯುದ್ಧ ವಿಮಾನವನ್ನು ರಾಜನಾಥ್ ಸಿಂಗ್ ಅವರಿಗೆ ಔಪಚಾರಿಕವಾಗಿ  ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಭಾರತದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಯಲ್ಲಿ ಹೆಚ್ಚಿನ ಪ್ರಾಬಲ್ಯ ಮೆರೆಯಲಿದೆ ಎಂಬ ನಂಬಿಕೆ ಹೊಂದಿರುವುದಾಗಿ ತಿಳಿಸಿದರು.

ಹಸ್ತಾಂತರಕ್ಕೂ ಮುನ್ನ ದಸರಾ ಆಚರಣೆ ಹಿನ್ನೆಲೆಯಲ್ಲಿ ಸಾಂಪ್ರಾದಾಯಿಕವಾಗಿ ಶಸ್ತ್ರ ಪೂಜೆಯನ್ನು ರಫೇಲ್ ಯುದ್ಧ ವಿಮಾನಕ್ಕೆ ಸಚಿವರು ನೆರವೇರಿಸಿದ್ದಾರೆ. 

ಸೆಪ್ಟೆಂಬರ್ 2016ರಲ್ಲಿ ಮಾಡಿಕೊಂಡ 59 ಸಾವಿರ ಕೋಟಿ ರೂಪಾಯಿ ಮೊತ್ತದ ಒಪ್ಪಂದದ  ಪ್ರಕಾರ ಮುಂದಿನ ವರ್ಷದ ಮೇ ತಿಂಗಳೊಳಗೆ ಮೊದಲ ಹಂತದಲ್ಲಿ ನಾಲ್ಕು ಯುದ್ಧ ವಿಮಾನಗಳು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. ಸೆಪ್ಟೆಂಬರ್ 2022ರೊಳಗೆ ಉಳಿದ ಎಲ್ಲಾ ಯುದ್ಧ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. 

ಫ್ಸಾನ್ಸ್ ನೊಂದಿಗೆ ಬಹು ಹಂತದ  ದ್ವಿಪಕ್ಷೀಯ ಸಂಬಂಧ ಹಾಗೂ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಒಪ್ಪಂದ ಕುರಿತಂತೆ ಮಾತುಕತೆ ನಡೆಸಲಾಗುತ್ತದೆ ಎಂದು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದ್ದಾರೆ. 
ಫ್ರಾನ್ಸ್ ರಕ್ಷಣಾ ಉದ್ಯಮದ ನಾಯಕರನ್ನು ಉದ್ದೇಶಿಸಿ ರಾಜನಾಥ್ ಸಿಂಗ್ ನಾಳೆ ಮಾತನಾಡಲಿದ್ದಾರೆ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com