ಮೋದಿ-ಕ್ಸಿ ಜಿನ್ ಪಿಂಗ್ ಸ್ವಾಗತಕ್ಕೆ ಮಹಾಬಲಿಪುರಂ ಕಲೆ-ವಾಸ್ತುಶಿಲ್ಪಗಳು ಸಜ್ಜು!

ಚೆನ್ನೈ ಹತ್ತಿರವಿರುವ ಮಹಾಬಲಿಪುರಂ ನಗರದಲ್ಲಿ ಇದೇ ವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮಧ್ಯೆ ಅನೌಪಚಾರಿಕ ಸಭೆ ನಡೆಯಲಿದೆ. 
ಸಮುದ್ರ ತೀರ ಮಹಾಬಲಿಪುರಂನಲ್ಲಿ ನಾಯಕರ ಸ್ವಾಗತಕ್ಕೆ ಸಕಲ ಸಿದ್ದತೆ
ಸಮುದ್ರ ತೀರ ಮಹಾಬಲಿಪುರಂನಲ್ಲಿ ನಾಯಕರ ಸ್ವಾಗತಕ್ಕೆ ಸಕಲ ಸಿದ್ದತೆ

ಕಾಂಚೀಪುರಂ: ಚೆನ್ನೈ ಹತ್ತಿರವಿರುವ ಮಹಾಬಲಿಪುರಂ ನಗರದಲ್ಲಿ ಇದೇ ವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮಧ್ಯೆ ಅನೌಪಚಾರಿಕ ಸಭೆ ನಡೆಯಲಿದೆ.

ಹೇಳಿಕೇಳಿ ಮಹಾಬಲಿಪುರಂ ಸುಂದರ ಶಿಲ್ಪಗಳು, ಕೆತ್ತನೆಗಳು,ದೇವಾಲಯಗಳು, ಪುರಾತನ ಸ್ಮಾರಕಗಳಿಗೆ ಹೆಸರುವಾಸಿ. ಭಾರತ-ಚೀನಾ ದೇಶಗಳ ಉಭಯ ನಾಯಕರ ಆಗಮನ ಹಿನ್ನಲೆಯಲ್ಲಿ ಇಲ್ಲಿ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. 


ಪಲ್ಲವರ ಆಳ್ವಿಕೆ ಕಾಲದಲ್ಲಿ ಕಲಾವಿದರಿಂದ ರಚನೆಯಾದ ಇಲ್ಲಿಂದ ಶಿಲ್ಪಗಳು ಇತಿಹಾಸ ಸಾರುತ್ತದೆ. ಮಹಾಬಲಿಪುರಂನ ಸ್ಮಾರಕಗಳ ಸಮೂಹವು ಚೆನ್ನೈ ನಗರದಿಂದ 65 ಕಿ.ಮೀ. ದಕ್ಷಿಣದಲ್ಲಿದೆ. ಶಿವನನ್ನು ಸ್ತುತಿಸುವ ಶಿಲ್ಪಗಳನ್ನು ಒಳಗೊಂಡ ಇಲ್ಲಿನ ದೇವಾಲಯಗಳು, ಮಂಟಪಗಳು ಮತ್ತು ರಥಗಳಿಗೆ ಮಹಾಬಲಿಪುರಂ ಹೆಸರಾಗಿವೆ. ಇಲ್ಲಿ ಹೆಚ್ಚಿನ ಗುಡಿಗಳನ್ನು ರಥದ ಆಕಾರದಲ್ಲಿ ನಿರ್ಮಿಸಲಾಗಿದೆ.ಮಹಾವಿಷ್ಣು ವಾಮನಾವತಾರ ತಾಳಿ ಮಹಾಬಲಿಯನ್ನು ಸಂಹಾರ ಮಾಡಿದ ಮಹಾಬಲಪುರಂ. ಹಿಂದೆ ಇದನ್ನು ಮಾಮಲಪುರವೆಂಬ ಹೆಸರಿನಿಂದಲೇ ಕರೆಯುತ್ತಿದ್ದರು. ಇದಕ್ಕೆ ಪೂರಕವಾಗಿ ವೈಷ್ಣವ ಮಂದಿರವೇ ಹೆಚ್ಚಾಗಿವೆ.


ಪಲ್ಲವ ರಾಜರ ಆಳ್ವಿಕೆ ಕಾಲದಲ್ಲಿ ತಮಿಳುನಾಡಿಗೆ ನೀಡಿದ ವಾಸ್ತುಶಿಲ್ಪದ ತಾಣ, ಕಲ್ಲುಗಳ ಅದ್ಭುತ ಕೆತ್ತನೆಯಿಂದಾಗಿಯೇ ಯೂನೆಸೋದ ವಿಶ್ವಪರಂಪರೆ ಪಟ್ಟಿಗೆ ಸೇರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com