ಜಮ್ಮು-ಕಾಶ್ಮೀರ ಬಿಡಿಸಿ ಚುನಾವಣೆ ಬಹಿಷ್ಕರಿಸಿ ಪ್ರತ್ಯೇಕತಾವಾದಿಗಳೊಂದಿಗೆ ಗುರುತಿಸಿಕೊಂಡ ಕಾಂಗ್ರೆಸ್!?

ತನ್ನ ನಡೆಗಳಿಂದ ತೀವ್ರ ವಿವಾದಕ್ಕೆ ಗುರಿಯಾಗುತ್ತಿರುವ ಕಾಂಗ್ರೆಸ್ ಪಕ್ಷ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ  ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. 
ಜಮ್ಮು-ಕಾಶ್ಮೀರ ಬಿಡಿಸಿ ಚುನಾವಣೆ ಬಹಿಷ್ಕರಿಸಿ ಪ್ರತ್ಯೇಕತಾವಾದಿಗಳೊಂದಿಗೆ ಗುರುತಿಸಿಕೊಂಡ ಕಾಂಗ್ರೆಸ್!?
ಜಮ್ಮು-ಕಾಶ್ಮೀರ ಬಿಡಿಸಿ ಚುನಾವಣೆ ಬಹಿಷ್ಕರಿಸಿ ಪ್ರತ್ಯೇಕತಾವಾದಿಗಳೊಂದಿಗೆ ಗುರುತಿಸಿಕೊಂಡ ಕಾಂಗ್ರೆಸ್!?

ಶ್ರೀನಗರ: ತನ್ನ ನಡೆಗಳಿಂದ ತೀವ್ರ ವಿವಾದಕ್ಕೆ ಗುರಿಯಾಗುತ್ತಿರುವ ಕಾಂಗ್ರೆಸ್ ಪಕ್ಷ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ  ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. 

ಜಮ್ಮು-ಕಾಶ್ಮೀರದ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ) ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಿದೆ. ಕಾಂಗ್ರೆಸ್ ನ ಈ ನಡೆಯನ್ನು ಕಾಶ್ಮೀರದ ಪ್ರತ್ಯೇಕತಾವಾದಿಗಳೊಂದಿಗೆ ಪಕ್ಷ ಸ್ಪಷ್ಟವಾಗಿ ಗುರುತಿಸಿಕೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಕಳೆದ 30 ವರ್ಷಗಳಿಂದ ಪ್ರತ್ಯೇಕತಾವಾದಿಗಳ ಹಿಂಸಾಚಾರ ನಡೆಯುತ್ತಿದ್ದು, ಅವರ ಪ್ರಕಾರ  ಭಾರತೀಯ ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸುವಂತೆ ರಾಜ್ಯದ ಜನತೆ ಹಾಗೂ ರಾಜಕೀಯ ಪಕ್ಷಗಳಿಗೆ ಪ್ರತ್ಯೇಕತಾವಾದಿಗಳು ಕರೆ ನೀಡುತ್ತಿದ್ದಾರೆ. 

ವಿಪರ್ಯಾಸವೆಂದರೆ ಕಾಂಗ್ರೆಸ್ ಪಕ್ಷ ಸಹ ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಿದ್ದು, ಪ್ರತ್ಯೇಕತಾವಾದಿಗಳ    ಭಾಷೆಯನ್ನೇ ಮಾತನಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಆದರೆ ಕಾಂಗ್ರೆಸ್ ತಾನು ಚುನಾವಣೆ ಬಹುಷ್ಕರಿಸಿರುವುದಕ್ಕೆ ಬೇರೆಯದ್ದೆ ಕಾರಣ ಹೇಳುತ್ತಿದೆ. ಕಣಿವೆಯಲ್ಲಿರುವ ತನ್ನ ಪಕ್ಷದ ನಾಯಕರು ಇನ್ನೂ ಬಂಧನದಲ್ಲಿದ್ದಾರೆ ಆದ್ದರಿಂದ ಬಿಡಿಸಿ ಚುನಾವಣೆಯಲ್ಲಿ  ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಿ.ಎ ಮಿರ್ ಪಕ್ಷದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. 

ತನ್ನ ಪಕ್ಷದ ನಾಯಕರಿಗೆ ಭದ್ರತೆ ನೀಡಬೇಕೆಂಬ ಮನವಿಯನ್ನೂ ರಾಜ್ಯದ ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎಂದು ಮಿರ್ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com