ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಮತ್ತಷ್ಟು ಸಂಕಷ್ಟ! 

ಉತ್ತರ ಪ್ರದೇಶದಲ್ಲಿ ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನವೇ ಸಮಸ್ಯೆ ಪ್ರಾರಂಭವಾಗಿದೆ. 

Published: 10th October 2019 05:57 PM  |   Last Updated: 10th October 2019 05:57 PM   |  A+A-


Congress in trouble in UP, resignations begin

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಮತ್ತಷ್ಟು ಸಂಕಷ್ಟ!

Posted By : Srinivas Rao BV
Source : Online Desk

ಉತ್ತರ ಪ್ರದೇಶದಲ್ಲಿ ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನವೇ ಸಮಸ್ಯೆ ಪ್ರಾರಂಭವಾಗಿದೆ. 

ಯುಪಿಸಿಸಿ ಅಧ್ಯಕ್ಷರಾಗಿ ಅಜಯ್ ಕುಮಾರ್ ಲಲ್ಲು ಪದಗ್ರಹಣ ಮಾಡುವುದಕ್ಕೂ ಮುನ್ನವೇ ಕಾಂಗ್ರೆಸ್ ನ ಹಿರಿಯ ನಾಯಕರು ಬಂಡಾಯವೆದ್ದಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನ ಮಾಜಿ ಸಂಸದ ರಾಜೇಶ್ ಮಿಶ್ರಾ ತಾವು ಪ್ರಿಯಾಂಕ ವಾದ್ರಗೆ ಯಾವುದೇ ಸಲಹೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ರಾಹುಲ್ ಗಾಂಧಿ ಪಲಾಯನವಾದ ಮಾಡುತ್ತಿದ್ದಾರೆ ಎಂಬ ಸಲ್ಮಾನ್ ಖುರ್ಷಿದ್ ಹೇಳಿಕೆಯ ಬೆನ್ನಲ್ಲೇ ಉತ್ತರ ಪ್ರದೇಶ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯುಂಟಾಗಿದೆ ಎಂದು ವಿಶ್ಲೇಶಿಸಲಾಗುತ್ತಿದೆ. 

ತಮ್ಮ ನಂತರದಲ್ಲಿ ಪಕ್ಷದಲ್ಲಿಗುರುತಿಸಿಕೊಂಡಿರುವ ಅಜಯ್ ಕುಮಾರ್ ಲಲ್ಲು ಪಕ್ಷದ ಅಧ್ಯಕ್ಷರಾಗಿರುವುದು ರಾಜೇಶ್ ಮಿಶ್ರಾಗೆ ಅಸಮಾಧಾನ ಉಂಟುಮಾಡಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp