ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅಪಾರ ಪ್ರಮಾಣದಲ್ಲಿ ಸಾಲ: ಇಡಿ ಅಧಿಕಾರಿಗಳಿಂದ ಕೆ.ಎನ್ ರಾಜಣ್ಣ ತೀವ್ರ ವಿಚಾರಣೆ

ಕಾಂಗ್ರೆಸ್ ಬಂಡಾಯ ನಾಯಕ ಕೆ.ಎನ್ ರಾಜಣ್ಣ ಅವರನ್ನು ನಿನ್ನೆ ಲೋಕನಾಯಕ ಭವನದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಕೆಎನ್ ರಾಜಣ್ಣ
ಕೆಎನ್ ರಾಜಣ್ಣ

ತುಮಕೂರು: ಕಾಂಗ್ರೆಸ್ ಬಂಡಾಯ ನಾಯಕ ಕೆ.ಎನ್ ರಾಜಣ್ಣ ಅವರನ್ನು ನಿನ್ನೆ ಲೋಕನಾಯಕ ಭವನದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಹರ್ಷ ಶುಗರ್ಸ್ ಕಾರ್ಖಾನೆಗೆ ಸಾಲ ನೀಡಿದ ವಿಚಾರದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್ ಕಾರ್ಖಾನೆಗೆ ಅಪೆಕ್ಸ್ ಬ್ಯಾಂಕ್‍ನಡಿ ಬರುವ ಕೆಲವು ಬ್ಯಾಂಕ್‍ಗಳಿಂದ ಸಾಲ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರಾಜಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ

ಉತ್ತರ ಕನ್ನಡ ಶಾಖೆ ಸೇರಿದಂತೆ ಜಿಲ್ಲಾ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ 100 ಕೋಟಿ, ಬಾಗಲಕೋಟೆ  ಡಿಸಿಸಿ ಬ್ಯಾಂಕ್ ನಿಂದ 10 ಕೋಟಿ ಸಾಲ ಪಡೆದಿದ್ದಾರೆ.

ಬೆಳಗ್ಗೆ 11.30ರಿಂದ ಸಂಜೆ 7 ಗಂಟೆವರೆಗೂ ಇಡಿ ಅಧಿಕಾರಿಗಳು ರಾಜಣ್ಣ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಸಾಲಕ್ಕಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಶ್ಯೂರಿಟಿ ಬಗ್ಗೆಯೂ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

215 ಕೋಟಿ ಸಾಲ ನೀಡಿರುವ ಬಗ್ಗೆಯೂ ವಿಚಾರಣೆ ತೀವ್ರಗೊಳಿಸಿದ್ದು ಅಕ್ಟೋಬರ್ 16 ಕ್ಕೆ ಮತ್ತೆ ಸಮನ್ಸ್ ನೀಡಲಾಗಿದೆ ಎನ್ನಲಾಗಿದೆ,

ವಿಚಾರಣೆ ಬಳಿಕ ಮಾತನಾಡಿದ ರಾಜಣ್ಣ, ಹರ್ಷ ಶುಗರ್ಸ್ ಗೆ ನೀಡಿರುವ ಸಾಲದ ಬಗ್ಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ,  ನನ್ನ ಕುಟುಂಬದ ಸದಸ್ಯರ ಹಣಕಾಸು ವಹಿವಾಟಿನ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ, ಹೀಗಾಗಿ ಕೆಲ ಸಮಯ ನೀಡುವಂತೆ ಅವರನ್ನು ಕೋರಿರುವುದಾಗಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com