ಡಾರ್ಜಿಲಿಂಗ್: ಸೆಲ್ಫಿ ಕ್ರೇಜ್​ಗೆ ಪ್ರಾಣತೆತ್ತ ಪ್ರವಾಸಿಗ

ಸೆಲ್ಫಿ ಕ್ರೇಜ್​ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಡಾರ್ಜಿಲಿಂಗ್ ಪ್ರವಾಸದಲ್ಲಿದ್ದ 53 ವರ್ಷದ ವ್ಯಕ್ತಿಯೊಬ್ಬ ಟಾಯ್ ಟ್ರೈನ್ ಮೇಲಿಂದ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಬುಧವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೂಗ್ಲಿ: ಸೆಲ್ಫಿ ಕ್ರೇಜ್​ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಡಾರ್ಜಿಲಿಂಗ್ ಪ್ರವಾಸದಲ್ಲಿದ್ದ 53 ವರ್ಷದ ವ್ಯಕ್ತಿಯೊಬ್ಬ ಟಾಯ್ ಟ್ರೈನ್ ಮೇಲಿಂದ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಬುಧವಾರ ನಡೆದಿದೆ.

ಮೃತ ವ್ಯಕ್ತಿ ಹೂಗ್ಲಿ ಜಿಲ್ಲೆಯ ವ್ಯಾಪಾರಿ ಪ್ರದೀಪ್ ಸಕ್ಸೆನಾ ಎಂದು ಗುರುತಿಸಲಾಗಿದ್ದು, ಟಾಯ್ ಟ್ರೈನ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಡಾರ್ಜಿಲಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದಾರಿ ಮಧ್ಯಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ದುರ್ಗಾ ಪೂಜೆ ರಜೆ ಹಿನ್ನೆಲೆಯಲ್ಲಿ ಸಕ್ಸೆನಾ, ಅವರ ಪತ್ನಿ ಹಾಗೂ ಮಗಳೊಂದಿಗೆ ಡಾರ್ಜಿಲಿಂಗ್ ಪ್ರವಾಸಕ್ಕೆ ಆಗಮಿಸಿದ್ದರು. ಈ ವೇಳೆ ಘುಮ್ ರೈಲ್ವೆ ನಿಲ್ದಾಣದಲ್ಲಿ ಟಾಯ್ ಟ್ರೈನ್ ಹತ್ತಿದ್ದರು. ಟ್ರೈನ್ ಡಾರ್ಜಿಲಿಂಗ್ ಕಡೆಗ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲಿನ ಮೆಟ್ಟಿಲು ಮೇಲೆ ನಿಂತಿದ್ದ ಸಕ್ಸೆನಾ ಅವರು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಆಗ ಸಮತೋಲನ ಕಳೆದುಕೊಂಡು ರೈಲಿನಿಂದ ಜಾರಿ ಕೆಳಗೆ ಬಿದ್ದಿದ್ದಾರೆ ಎಂದು ಡಾರ್ಜಿಲಿಂಗ್ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com