ಅಯೋಧ್ಯ ವಿವಾದ: ಹಿಂದೂಗಳಿಗೆ ಭೂಮಿ ' ಗಿಫ್ಟ್' ನೀಡಲು ಮುಸ್ಲಿಂ ಬೌದ್ಧಿಕ ಗುಂಪು ಸಲಹೆ 

ಅಯೋಧ್ಯ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಲು  ಮುಸ್ಲಿಂ ಸಮುದಾಯದ ಬೌದ್ಧಿಕ ಗುಂಪೊಂದು ಒಲವು ತೋರಿಸಿದ್ದು,  ಮುಸ್ಲಿಂರು ವಿವಾದಿತ ಜಾಗವನ್ನು ಸ್ನೇಹಪೂರ್ವಕವಾಗಿ ಕೇಂದ್ರ ಸರ್ಕಾರಕ್ಕೆ ನೀಡಿದರೆ ದೇಶದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅಯೋಧ್ಯ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಲು  ಮುಸ್ಲಿಂ ಸಮುದಾಯದ ಬೌದ್ಧಿಕ ಗುಂಪೊಂದು ಒಲವು ತೋರಿಸಿದ್ದು,  ಮುಸ್ಲಿಂರು ವಿವಾದಿತ ಜಾಗವನ್ನು ಸ್ನೇಹಪೂರ್ವಕವಾಗಿ ಕೇಂದ್ರ ಸರ್ಕಾರಕ್ಕೆ ನೀಡಿದರೆ ದೇಶದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದೆ. 

ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವ ಸಂಬಂಧ ನಿನ್ನೆ ನಿರ್ಣಯವೊಂದನ್ನು ಕೈಗೊಳ್ಳಲಾಗಿದೆ ಎಂದು ನೂತನ ಸ್ಥಾಪಿತ ಶಾಂತಿಗಾಗಿ ಭಾರತೀಯರು ಮುಸ್ಲಿಂರು ವೇದಿಕೆ  ಸಂಚಾಲಕ ಕಲಾಂ ಖಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ನ್ಯಾಯಾಲಯದ ಹೊರಗಡೆ ವಿವಾದವನ್ನು ಬಗೆಹರಿಸಿಕೊಳ್ಳುವುದರಿಂದ ಹಿಂದೂ- ಮುಸ್ಲಿಂರು ಸಂತೋಷದಿಂದ ಇರಬಹುದು, ಯಾವುದೇ ಸಮುದಾಯವು ಆಕ್ರಮಣಕಾರಿ ಭಾವನೆ ತಾಳಬಾರದು ಎಂದರು. 

ಹಿಂದೂ- ಮುಸ್ಲಿಂ ನಡುವಿನ ಸಂಬಂಧಕ್ಕೆ ಶತಮಾನದ ಇತಿಹಾಸವಿದೆ. ಜಾತ್ಯತೀತ ಹಾಗೂ ಪ್ರಜಾಸತಾತ್ಮಕ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ವಿವಾದಿತ ಜಾಗವನ್ನು ಸೌಹಾರ್ದತೆಯ ಭಾವನೆಯೊಂದಿಗೆ ಸುಪ್ರೀಂಕೋರ್ಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಹಸ್ತಂತರಿಸಬೇಕು ಎಂದು ಅವರು ಮುಸ್ಲಿಂ ಸಮುದಾಯಕ್ಕೆ  ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com