ಟಾಯ್ಲೆಟ್'ನಲ್ಲಿ ವರ ಸೆಲ್ಫೀ ಕ್ಲಿಕ್ಕಿಸಿದರೆ ವಧುಗೆ ಸಿಗುತ್ತೆ ರೂ.51, 000!

ವಿವಾಹಕ್ಕೂ ಮುನ್ನ ಗಂಡು-ಹೆಣ್ಣು ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವುದು ಸಾಮಾನ್ಯ. ಆದರೆ, ಮದುವೆಗೂ ಮುನ್ನ ವರ ಟಾಯ್ಲೆಟ್ ನಲ್ಲಿ ಸೆಲ್ಫೀ ಕ್ಲಿಕ್ಕಿಸಿದರೆ, ವಧುವಿಗೆ ಸರ್ಕಾರದಿಂದ ರೂ.51,000 ಸಿಗಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭೋಪಾಲ್: ವಿವಾಹಕ್ಕೂ ಮುನ್ನ ಗಂಡು-ಹೆಣ್ಣು ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವುದು ಸಾಮಾನ್ಯ. ಆದರೆ, ಮದುವೆಗೂ ಮುನ್ನ ವರ ಟಾಯ್ಲೆಟ್ ನಲ್ಲಿ ಸೆಲ್ಫೀ ಕ್ಲಿಕ್ಕಿಸಿದರೆ, ವಧುವಿಗೆ ಸರ್ಕಾರದಿಂದ ರೂ.51,000 ಸಿಗಲಿದೆ. 

ಅಚ್ಚರಿ ಎನಿಸಿದರೂ ಇದು ಸತ್ಯ. ಬಯಲು ಶೌಚ ಮುಕ್ತಗೊಳಿಸುವ ಉದ್ದೇಶದಿಂದ ಮಧ್ಯಪ್ರದೇಶ ಸರ್ಕಾರ ಇಂತಹದ್ದೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ವಿವಾಹಕ್ಕೂ ಮುನ್ನ ಪ್ರತೀಯೊಬ್ಬ ಹುಡುಗನ ಮನೆಯಲ್ಲಿಯೂ ಶೌಚಾಲಯ ಇರಬೇಕೆಂಬುದು ಯೋಜನೆಯ ಉದ್ದೇಶವಾಗಿದೆ. 

ಮಧ್ಯಪ್ರದೇಶದ ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿಯಲ್ಲಿ ವಧು ಹಣ ಪಡೆದುಕೊಳ್ಳಬೇಕಾದರೆ, ಮದುವೆಯಾಗುವ ಗಂಡನ ಮನೆಯ ಶೌಚಾಲಯ ಇದೆ ಎಂಬುದನ್ನು ಸಾಕ್ಷ್ಯ ಸಮೇತ ಸಾಬೀತು ಪಡಿಸಬೇಕು. ವಧುವಿಗೆ ಸರ್ಕಾರದಿಂದ ಹಣ ಸಿಗಬೇಕಾದರೆ, ವರ ತನ್ನ ಮನೆಯ ಟಾಯ್ಲೆಟ್'ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಅಧಿಕಾರಿಗಳಿಗೆ ದಾಖಲೆಗಳ ಜೊತೆಗೆ ನೀಡಬೇಕು. ಬಳಿಕ ಯೋಜನೆಯಡಿ ಮದುಮಗಳಿಗೆ ರೂ.51 ಸಾವಿರ ಹಣವನ್ನು ಸರ್ಕಾರ ನೀಡಲಿದೆ. 

2013ರಲ್ಲಿ ಮುಖ್ಯಮಂತ್ರಿ ಕನ್ಯಾ ಯೋಜನೆ ಜಾರಿಗೆ ತರಲಾಗಿತ್ತು. ಯೋಜನೆ ಜಾರಿಯಾದ ಆರಂಭದಲ್ಲಿ ಶೌಚಾಲಯ ಇರಬೇಕೆಂಬ ಕಡ್ಡಾಯ ನಿಯಮವನ್ನು ಘೋಷಣೆ ಮಾಡಲಾಗಿತ್ತು. ಇದೀಗ ಸೆಲ್ಫಿ ವಿತ್ ಟಾಯ್ಲೆಟ್ ಎಂಬ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com