ತಲೆ ಮೇಲೆ ಶೂ ಇಟ್ಕೊಂಡು ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ: ಕಾರಣವೇನು ಗೊತ್ತೇ?

ಚುನಾವಣೆ ಬಂತೆಂದರೆ ಅಲ್ಲಿ ಒಂದಿಷ್ಟು ಸ್ವಾರಸ್ಯ ಘಟನೆಗಳಿಗೆ ಕೊರತೆ ಇರುವುದಿಲ್ಲ. ಅಂಥಹದ್ದೇ ಘಟನೆ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಹರ್ಯಾಣದಲ್ಲಿ ನಡೆದಿದೆ.
ತಲೆ ಮೇಲೆ ಶೂ ಇಟ್ಕೊಂಡು ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ: ಕಾರಣವೇನು ಗೊತ್ತೇ?
ತಲೆ ಮೇಲೆ ಶೂ ಇಟ್ಕೊಂಡು ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ: ಕಾರಣವೇನು ಗೊತ್ತೇ?

ಚಂಡೀಗಢ: ಚುನಾವಣೆ ಬಂತೆಂದರೆ ಅಲ್ಲಿ ಒಂದಿಷ್ಟು ಸ್ವಾರಸ್ಯ ಘಟನೆಗಳಿಗೆ ಕೊರತೆ ಇರುವುದಿಲ್ಲ. ಅಂಥಹದ್ದೇ ಘಟನೆ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಹರ್ಯಾಣದಲ್ಲಿ ನಡೆದಿದೆ.

ಪಾಲ್ವಾಲ್ ಜಿಲ್ಲೆಯ ಹೋಡಲ್ (ಮೀಸಲು ಕ್ಷೇತ್ರ) ನಿಂದ ಸ್ಪರ್ಧಿಸಿರುವ ಜಗದೀಶ್ ನಾಯರ್ ಶೂ ಹೊತ್ತುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಅಲ್ಲಿರುವ ನಿರ್ದಿಷ್ಟ ಸಮುದಾಯದವರು ಜಗದೀಶ್ ನಾಯರ್ ಹೇಳಿಕೆಯಿಂದ ಆಕ್ರೋಶಗೊಂಡಿರುವುದು ಇದಕ್ಕೆ ಕಾರಣ! 

ಜಗದೀಶ್ ನಾಯರ್ ತಮ್ಮ ವಿರುದ್ಧ ಕೇಳಿವಂದಿರುವ ಆರೋಪವನ್ನು ನಿರಾಕರಿಸಿದ್ದು, ಯಾವುದೇ ಸಮುದಾಯದ ವಿರುದ್ಧವೂ ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ. 

ನಾನು ಆಯ್ಕೆಯಾದರೆ, ಸೆವಕನ ರೀತಿಯಲ್ಲಿ ಕೆಲಸ ಮಾಡುತ್ತೇನೆಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದೇನೆ ಎಂದು ಮಾಧ್ಯಮಗಳಿಗೆ ತಮ್ಮ ವಿನೂತನ ರೀತಿಯ ಮತಯಾಚನೆ ಬಗ್ಗೆ ಜಗದೀಶ್ ನಾಯರ್ ಹೇಳಿದ್ದಾರೆ. 

ಹೋಡಲ್ ಗ್ರಾಮೀಣ ಕ್ಷೇತ್ರವಾಗಿದ್ದು, ಕನಿಷ್ಟ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. 2014 ರ ವಿಧಾನಸಭಾ ಕ್ಷೇತ್ರದಲ್ಲಿ ಪಾಲ್ವಾಲ್ ಜಿಲ್ಲೆಯ ಎಲ್ಲಾ 3 ಕ್ಷೇತ್ರಗಳನ್ನೂ ಬಿಜೆಪಿಯೇತರ ಪಕ್ಷಗಳು ಗೆದ್ದಿದ್ದವು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com