ರಫೆಲ್ ಯುದ್ಧ ವಿಮಾನ ಶಸ್ತ್ರ ಪೂಜೆಗೆ ಟೀಕೆ; ಪೂಜೆ ಮಾಡಿದ ರಾಜನಾಥ್ ಸಿಂಗ್ ಹೇಳಿದ್ದೇನು?

ಭಾರತದ ಬಹು ನಿರೀಕ್ಷಿತ ಯುದ್ಧ ವಿಮಾನ ರಫೆಲ್ ಗೆ ರಕ್ಷಣಾ ಸಚಿವರು ನಡೆಸಿದ್ದ ಶಸ್ತ್ರ ಪೂಜೆ ಕುರಿತಂತೆ ವಿವಾದ ಸೃಷ್ಟಿಯಾಗಿದ್ದು, ಈ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಭಾರತದ ಬಹು ನಿರೀಕ್ಷಿತ ಯುದ್ಧ ವಿಮಾನ ರಫೆಲ್ ಗೆ ರಕ್ಷಣಾ ಸಚಿವರು ನಡೆಸಿದ್ದ ಶಸ್ತ್ರ ಪೂಜೆ ಕುರಿತಂತೆ ವಿವಾದ ಸೃಷ್ಟಿಯಾಗಿದ್ದು, ಈ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ರಫೆಲ್ ಯುದ್ಧ ವಿಮಾನ ಹಸ್ತಾಂತರ ಸಂಬಂಧ ಫ್ರಾನ್ಸ್ ಗೆ ತೆರಳಿದ್ದ ರಾಜನಾಥ್ ಸಿಂಗ್ ಇಂದು ಭಾರತಕ್ಕೆ ವಾಪಸ್ ಆಗಿದ್ದು, ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಜನಾಥ್ ಸಿಂಗ್ ಅವರು, ಫ್ರಾನ್ಸ್ ನಲ್ಲಿ ನಾನು ಮಾಡಿದ ಪೂಜೆ ಕುರಿತಂತೆ ವ್ಯಾಪಕ ಟೀಕೆಗಳು ಹರಿದಾಡುತ್ತಿವೆ. ಆದರೆ ನಾನು ಮಾಡಿದ್ದು ಸೂಕ್ತವಾಗಿತ್ತು. ಅದು ನಮ್ಮ ಸಂಸ್ಕೃತಿ. ನಾವು ಚಿಕ್ಕಂದಿನಿಂದಲೂ ನಂಬಿದಂತೆ ನಮ್ಮನ್ನು ಒಂದು ಅಗೋಚರ ಶಕ್ತಿ ಕಾಯುತ್ತದೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಕುರಿತಂತೆಯೂ ಟೀಕೆ ನಡೆಸಿದ ರಾಜನಾಥ್ ಸಿಂಗ್ ಶಸ್ತ್ರ ಪೂಜೆ ಕುರಿತಂತೆ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷದಲ್ಲೇ ಈ ಬಗ್ಗೆ ಒಮ್ಮತವಿಲ್ಲ.  ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಪಕ್ಷದ ಇತರೆ ನಾಯಕ ಹೇಳಿಕೆಯನ್ನು ವಿರೋಧಿಸಿದ್ದಾರೆ ಎಂದು ಹೇಳಿದರು.

ಇನ್ನು ರಾಜನಾಥ್ ಸಿಂಗ್ ಅವರು ಶಸ್ತ್ರ ಪೂಜೆ ಕುರಿತಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅದೇ ಪಕ್ಷದ ಸಂಜಯ್ ನಿರುಪಮ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com