ಪಿಒಕೆಯಲ್ಲಿ ಭೂಮಿ ತೆರವಿಗೆ ' 56 ಇಂಚು' ಎದೆಯ ಮೋದಿ ಕ್ಸಿಗೆ ಹೇಳಲಿ- ಕಪಿಲ್ ಸಿಬಲ್ 

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 5 ಸಾವಿರ ಎಕರೆ ಭೂಮಿಯನ್ನು ತೆರವುಗೊಳಿಸುವಂತೆ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರಿಗೆ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ 56 ಇಂಚಿನ ಎದೆಯನ್ನು ತೋರಿಸಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಸವಾಲು ಹಾಕಿದ್ದಾರೆ.
ಮೋದಿ, ಕಪಿಲ್ ಸಿಬಲ್
ಮೋದಿ, ಕಪಿಲ್ ಸಿಬಲ್

ನವದೆಹಲಿ:  ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 5 ಸಾವಿರ ಎಕರೆ ಭೂಮಿಯನ್ನು ತೆರವುಗೊಳಿಸುವಂತೆ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರಿಗೆ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ 56 ಇಂಚಿನ ಎದೆಯನ್ನು ತೋರಿಸಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಸವಾಲು ಹಾಕಿದ್ದಾರೆ.

5ಜಿಗಾಗಿ ವುಹಾವೇ ಭಾರತದಲ್ಲಿ ಇಲ್ಲ ಎಂಬುದುನ್ನು ಸ್ಪಷ್ಟಪಡಿಸಲಿ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲರು ಆಗಿರುವ ಕಪಿಲ್ ಸಿಬಲ್ ಹೇಳಿದ್ದಾರೆ.

ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅನೌಪಚಾರಿಕ ಶೃಂಗಸಭೆಗೆ ಕ್ಷಣಗಣನೆ ಆರಂಭವಾಗುತ್ತಿರುವಂತೆಯೇ ಕಪಿಲ್ ಸಿಬಲ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಕ್ಸಿ- ಕಾಶ್ಮೀರ ಬಗ್ಗೆ ವೀಕ್ಷಿಸುತ್ತಿರುವುದಾಗಿ ಹೇಳುವಾಗ ಹಾಂಗ್ ಕಾಂಗ್ ನಲ್ಲಿನ ಪ್ರಜಾಸತಾತ್ಮಕ ಆಂದೋಲನದ ಬಗ್ಗೆ ವೀಕ್ಷಿಸುತ್ತಿರುವುದಾಗಿ ಪ್ರಧಾನಿ ಮೋದಿ ಏಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಭಾರತದ ಆಂತರಿಕ ವ್ಯವಹಾರದಲ್ಲಿ ಚೀನಾ ತಲೆಹಾಕದಂತೆ ತಡೆಯುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com