ಮಹಾಬಲಿಪುರಂ: ಕ್ಸಿ ಜಿನ್ ಪಿಂಗ್ ಗೆ ಪ್ರಧಾನಿ ಮೋದಿ ವಿಶೇಷ ಭೋಜನ ಕೂಟ, ಭೂರಿ ಭೋಜನ!

ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಪ್ರಧಾನಿ ಮೋದಿ ಮಹಾಬಲಿಪುರಂನಲ್ಲಿ ವಿಶೇಷ ಭೋಜನಕೂಟ ಏರ್ಪಡಿಸಿದ್ದು, ಉಭಯ ನಾಯಕರು ಸುಧೀರ್ಘ ಸಮಯದ ಬಳಿಕ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಧಾನಿ ಮೋದಿ-ಕ್ಸಿ ಜಿನ್ ಪಿಂಗ್
ಪ್ರಧಾನಿ ಮೋದಿ-ಕ್ಸಿ ಜಿನ್ ಪಿಂಗ್

ಚೆನ್ನೈ: ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಪ್ರಧಾನಿ ಮೋದಿ ಮಹಾಬಲಿಪುರಂನಲ್ಲಿ ವಿಶೇಷ ಭೋಜನಕೂಟ ಏರ್ಪಡಿಸಿದ್ದು, ಉಭಯ ನಾಯಕರು ಸುಧೀರ್ಘ ಸಮಯದ ಬಳಿಕ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

ಮಹಾಬಲಿಪುರಂನಲ್ಲಿರುವ ದೇಗುಲದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಖಾಸಗಿ ಹೊಟೆಲ್ ಗೆ ತೆರಳಿದ ಉಭಯ ನಾಯಕರು, ಭೋಜನ ಕೂಟದಲ್ಲಿ ಪಾಲ್ಗೊಂಡರು. ಕ್ಸಿ ಜಿನ್ ಪಿಂಗ್ ಗಾಗಿ ಪ್ರಧಾನಿ ಮೋದಿ ವಿಶೇಷ ಭೋಜನ ಕೂಟ ಏರ್ಪಡಿಸಿದ್ದು, ಔತಣಕೂಟದಲ್ಲಿ ಹಲವು ದೇಸೀ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.

ಔತಣಕೂಟದಲ್ಲಿ ಸಿದ್ಧಪಡಿಸಲಾಗಿರುವ ಖಾದ್ಯಗಳ ಪಟ್ಟಿ ಇಂತಿದೆ.
ಟೊಮೊಟೋ ರಸಂ, ಕೇರಳ ಸ್ಪೆಷಲ್ ಮಲಬಾರ್ ಲಾಬ್ ಸ್ಟರ್, ವಿಶೇಷ ಚಿಕನ್ ಖಾದ್ಯ ಕೊರಿ ಕೆಂಪು, ಮಟನ್ ಉಲರ್ ಥಿಯಾಡು, ಕರಿಬೇವು ಮೀನು ಕರಿ, ತಂಜಾವೂರ್ ಕೋಳಿ ಕರಿ, ಚೆಟ್ಟಿನಾಡ್ ಸ್ಪೆಷಲ್ ಯೆರಚಿಘೆಟ್ಟಿಕೊಳಂಬು (ಸಾರು), ಆಂಧ್ರ ಸ್ಪೆಷಲ್ ಬಿಟ್ರೂಟ್ ಗೋಂಗೂರ ಚಾಪ್ಸ್, ತಮಿಳುನಾಡಿನ ದೇಸೀ ಸ್ಪೆಷಲ್ ಪಚ್ಚ ಸುಂಡಕೈ ಅರಿಚಾ ಕೊಳಂಬು, ಅರಚ್ಚವಿಟ್ಟಾ ಸಾಂಬಾರ್, ಆಂಧ್ರ ಸ್ಟೈಲ್ ಮಾಂಸದ ಬಿರಿಯಾನಿ, ಕೇರಳ ಸ್ಪೆಷಲ್ ಅದ ಪ್ರಾಧಮನ್ (ಬೆಲ್ಲ ಮತ್ತು ಅಕ್ಕಿಯಿಂದ ತಯಾರಿಸಿದ ಸಿಹಿ ಖಾದ್ಯ) ಕವನರಸಿ ಹಲ್ವಾ, ಮುಕ್ಕಾನಿ ಐಸ್ ಕ್ರೀಮ್ ಮತ್ತು ಟೀ, ಕಾಫಿ ಮತ್ತು ಮಸಾಲಾ ಟೀ ಸಿದ್ಧಪಡಿಸಲಾಗಿದೆ.

ಭೋಜನ ಕೂಟದ ನಡುವೆಯೇ ಮೋದಿ ಮತ್ತು ಕ್ಸಿ ಅನೌಪಚಾರಿಕ ಸಭೆ ನಡೆಸಲಿದ್ದು, ಈ ವೇಳೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com