ನವೆಂಬರ್ 8ಕ್ಕೆ ಪ್ರಧಾನಿ ಮೋದಿಯಿಂದ ಕರ್ತಾರ್ ಪುರ್ ಕಾರಿಡಾರ್ ಲೋಕಾರ್ಪಣೆ

ಸಿಖ್ ಸಮುದಾಯದ ಬಹು ನಿರೀಕ್ಷಿತ ಪಾಕಿಸ್ತಾನದ ಕರ್ತಾರ್ ಪುರ್ ಸಾಹಿಬ್  ಸಂಪರ್ಕಿಸುವ ಕರ್ತಾರ್ ಪುರ್ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8 ರಂದು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಹರ್ ಸಿಮ್ರಾತ್ ಕೌರ್ ಬಾದಲ್ ತಿಳಿಸಿದ್ದಾರೆ. 
ಕರ್ತಾರ್ ಪುರ್
ಕರ್ತಾರ್ ಪುರ್

ನವದೆಹಲಿ: ಸಿಖ್ ಸಮುದಾಯದ ಬಹು ನಿರೀಕ್ಷಿತ ಪಾಕಿಸ್ತಾನದ ಕರ್ತಾರ್ ಪುರ್ ಸಾಹಿಬ್  ಸಂಪರ್ಕಿಸುವ ಕರ್ತಾರ್ ಪುರ್ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8 ರಂದು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಹರ್ ಸಿಮ್ರಾತ್ ಕೌರ್ ಬಾದಲ್ ತಿಳಿಸಿದ್ದಾರೆ. 

ಗುರು ನಾನಕ್ ದೇವ್ ಅವರ ಆಶೀರ್ವಾದದಿಂದ ನವೆಂಬರ್ 8 ರಂದು ಕರ್ತಾರ್ ಪುರ್ ಕಾರಿಡಾರ್ ಉದ್ಘಾಟಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಇತಿಹಾಸ ಸೃಷ್ಟಿಸಲಿದ್ದಾರೆ ಎಂದು ಬಾದಲ್ ಟ್ವೀಟ್ ಮಾಡಿದ್ದಾರೆ.

72 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ಮಾಡಲು ಸಾಧ್ಯವಾಗಿದಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಈಗ ಸರಿ ಮಾಡಿದ್ದಾರೆ  ಎಂದು ಅವರು ಹೇಳಿದ್ದಾರೆ. 

ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನೆ ಸೇರಿದಂತೆ ಗುರು ನಾನಕ್ ಅವರ 550ನೇ ಪ್ರಕಾಶ್ ಪುರ್ಬ್ ಮಹೋತ್ಸವದಲ್ಲಿ  ಪಾಲ್ಗೊಳ್ಳುವಂತೆ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್  ಕಳೆದ ವಾರ ಆಹ್ವಾನಿಸಿದ್ದರು. 

ಕರ್ತಾರ್ ಪುರ್ ಕಾರಿಡಾರ್  ನಿರ್ಮಾಣ ಸಂಬಂಧ ಕಳೆದ ನವೆಂಬರ್ ತಿಂಗಳಲ್ಲಿ ಭಾರತ- ಪಾಕಿಸ್ತಾನ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com