ಗಟ್ಟಿ ಜೀವ: ಸತ್ತಿದೆ ಎಂದು ಮಣ್ಣಿನಲ್ಲಿ ಹೂತ ಬಳಿಕ ಬದುಕಿ ಬಂದ ನವಜಾತ ಶಿಶು!

ಸತ್ತಿದೆ ಎಂದು ಮಣ್ಣಿನಲ್ಲಿ ಹೂತಿದ್ದರೂ ನವಜಾತ ಶಿಶುವೊಂದು ಬದುಕಿ ಬಂದಿರುವ ಪವಾಡಸದೃಶ ಘಟನೆಯೊಂದು ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಸತ್ತಿದೆ ಎಂದು ಮಣ್ಣಿನಲ್ಲಿ ಹೂತಿದ್ದರೂ ನವಜಾತ ಶಿಶುವೊಂದು ಬದುಕಿ ಬಂದಿರುವ ಪವಾಡಸದೃಶ ಘಟನೆಯೊಂದು ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. 

ಸಬ್ ಇನ್ಸ್'ಪೆಕ್ಟರ್ ಆಗಿರುವ ಹಿತೇಶ್ ಎಂಬುವವರ ಪತ್ನಿ ವೈಶಾಲಿ ಎಂಬುವವರು ಕಳೆದ ಬುಧವಾರ 7 ತಿಂಗಳ ಮಗುವೊಂದಕ್ಕೆ ಜನ್ಮ ನೀಡಿದ್ದರು. ಆದರೆ ಮಗು ಪ್ರಸವಪೂರ್ವದಲ್ಲೇ ಮೃತಪಟ್ಟಿತ್ತು. ಹಿತೇಶ್ ಅವರು ಮಗುವನ್ನು ಹೂಳಲು ಮಗುವನ್ನು ಒಯ್ದಿದ್ದರು. ಮಗುವನ್ನು ಹೂಳಲು ಗುಂಡಿ ತೋಡಿದಾಗ ಗುದ್ದಲಿಗೆ ಮಡಿಕೆಯೊಂದು ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಮಗು ಅಳುವುದು ಕೇಳಿಸಿದೆ. ಅಳುತ್ತಿರುವ ಮಗು ತನ್ನದೇ ಎಂದು ಹಿತೇಶ್ ನೋಡಿದ್ದಾರೆ. ಆದರೆ, ಈ ವೇಳೆ ಅಳುತ್ತಿರುವುದು ಮಡಿಕೆಯೊಳಗಿರುವುದು ಎಂಬುದು ತಿಳಿದಿದೆ. ಕೂಡಲೇ ಮಡಿಕೆಯನ್ನು ತೆಗೆದು ನೋಡಿದಾಗ ಮಗು ಇರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ಪೋಷಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

ಮಡಿಕೆಯಲ್ಲಿ ಸಿಕ್ಕ ಮಗು ನವಜಾತ ಶಿಶುವಾಗಿದ್ದು, ಮಗುವಿನ ತೂಕ ಕೇವಲ 1.1 ಕೆಜಿ ಇದೆ. ಅಲ್ಲದೆ, ಮಗು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದು, ಮಗುವನ್ನು ಆಮ್ಲಜನಕ ಬೆಂಬಲದೊಂದಿಗೆ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಮಗುವನ್ನು ಪರಿಶೀಲನೆ ನಡೆಸಿದ ವೈದ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮಣ್ಣಿನಲ್ಲಿ ಹೂತಿದ್ದರೂ ಮಗು ಹೇಗೆ ಬದುಕಿತು ಎಂಬುದು ಈವರೆಗೂ ಯಾರಿಗೂ ಅರ್ಥವಾಗಿಲ್ಲ. ಅತ್ಯಂತ ಕಡಿಮೆ ತೂಕವಿರುವ ಮಗು, ಕೇವಲ 5 ದಿನಗಳ ಹಿಂದಷ್ಟೇ ಜನಿಸಿದ ಮಗು ಮಣ್ಣಿನ ಅಡಿಯಲ್ಲಿ ಪ್ರತಿಕೂಲದ ವಾತಾವರಣದ ನಡುವೆಯೂ ಹೇಗೆ ಬದುಕಿ ಬಂತು ಎಂಬುದು ವೈದ್ಯರಲ್ಲಿಯೂ ಆಶ್ಚರ್ಯವನ್ನು ತರಿಸಿದೆ. 

ಮಣ್ಣಿನ ಮಧ್ಯೆ ರಂಧ್ರಗಳೇನಾದರೂ ಇದ್ದಿರಬಹುದು. ರಂಧ್ರಗಳ ಮೂಲಕ ಗಾಳಿ ಬಂದು ಮಗು ಬದುಕುಳಿದಿರಬಹುದು ಎಂದು ವೈದ್ಯರು ಊಹಿಸಿದ್ದಾರೆ. ಪ್ರಸ್ತುತ ಮಗುವನ್ನು ಲಘುಉಷ್ಣತೆ (ಹೈಪೊಥರ್ಮಿಯಾ)ಯಲ್ಲಿರಿಸಲಾಗಿದ್ದು, ಆಕ್ಸಿಜನ್ ಅಳವಡಿಸಲಾಗಿದೆ. ಮಗುವಿನ ಶ್ವಾಸಕೋಶದಲ್ಲಿ ಸೋಂಕು ಕಂಡು ಬಂದಿದ್ದು, ನೇರವಾಗಿ ಹಾಲನ್ನು ಕುಡಿಯಲು ಮಗುವಿಗೆ ಸಾಧ್ಯವಾಗುತ್ತಿಲ್ಲ. ಮಗುವನ್ನು ರಕ್ಷಣೆ ಮಾಡಲು ಎಲ್ಲಾ ರೀತಿಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com