ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಇನ್ ಸ್ಟಾಗ್ರಾಂನಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಿರುವ ಜಾಗತಿಕ ನಾಯಕ ಪ್ರಧಾನಿ ಮೋದಿ!

 ಟ್ವಿಟರ್ ನಲ್ಲಿ ದಾಖಲೆಯ 50 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಇನ್ ಸ್ಟಾಗ್ರಾಂನಲ್ಲೂ 30 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ

ನವದೆಹಲಿ:  ಟ್ವಿಟರ್ ನಲ್ಲಿ ದಾಖಲೆಯ 50 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಇನ್ ಸ್ಟಾಗ್ರಾಂನಲ್ಲೂ 30 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ  ಪ್ರಧಾನಿ ನರೇಂದ್ರ ಮೋದಿ ಪೋಟೋ ಶೇರಿಂಗ್ ಆ್ಯಪ್ ನಲ್ಲಿ ಅತಿ ಹೆಚ್ಚು ಅನುಸರಿಸುವ ವಿಶ್ವದ ನಾಯಕರು ಆಗಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತುತ  ಇನ್ ಸ್ಟಾಗ್ರಾಂನಲ್ಲಿ 14. 9 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಹಿಂದಿನ ಅಧ್ಯಕ್ಷ ಬಾರಕ್ ಒಬಾಮಾ 24. 8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ  ಡೊನಾಲ್ಡ್ ಟ್ರಂಪ್ ಹಾಗೂ  ಬರಾಕ್ ಒಬಾಮಾ ಅವರನ್ನು ಹಿಂದಿಕ್ಕಿರುವ ಪ್ರಧಾನಿ ನರೇಂದ್ರ ಮೋದಿ  30 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಅತಿ ಹೆಚ್ಚಿನ  ಅನುಯಾಯಿಗಳನ್ನು ಹೊಂದಿರುವ ಜಾಗತಿಕ ನಾಯಕರಾಗಿದ್ದಾರೆ.  ಇದು ಅವರ ಜನಪ್ರಿಯತೆ ಹಾಗೂ ಯುವಕರೊಂದಿಗೆ ಹೊಂದಿರುವ ಸಂಪರ್ಕಕ್ಕೆ ಮತ್ತೊಂದು ಕೈಗನ್ನಡಿಯಾಗಿದೆ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ನಲ್ಲಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ 50.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ ಡೊನಾಲ್ಡ್ ಟ್ರಂಪ್ 65. 7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com