ನವದೆಹಲಿ: ಪ್ರಧಾನಿ ಮೋದಿ ಸಹೋದರನ ಪುತ್ರಿಯ ಪರ್ಸ್ ದರೋಡೆ!

ರಾಷ್ಟ್ರ ರಾಜಧಾನಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಪುತ್ರಿಯ ಪರ್ಸ್ ಹಾಗೂ ಮೊಬೈಲ್ ಪೋನ್ ನ್ನು ದುಷ್ಕರ್ಮಿಗಳು ದರೋಡೆ ಮಾಡಿರುವ ಘಟನೆ ಶನಿವಾರ ನಡೆದಿದೆ.

Published: 13th October 2019 01:00 AM  |   Last Updated: 13th October 2019 01:00 AM   |  A+A-


PMModi

ಪ್ರಧಾನಿ ನರೇಂದ್ರ ಮೋದಿ

Posted By : Nagaraja AB
Source : PTI

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಪುತ್ರಿಯ ಪರ್ಸ್ ಹಾಗೂ ಮೊಬೈಲ್ ಪೋನ್ ನ್ನು ದುಷ್ಕರ್ಮಿಗಳು ದರೋಡೆ ಮಾಡಿರುವ ಘಟನೆ ಶನಿವಾರ ನಡೆದಿದೆ.

ಈ ಸಂಬಂಧ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಪುತ್ರಿ ದಮಯಂತಿ ಬೇನ್ ಮೋದಿ ಪೊಲೀಸರಿಗೆ ದೂರು ನೀಡಿದ್ದಾರೆ.

ದಮಯಂತಿ ಬೇನ್ ಮೋದಿ ಅಮೃತಸರದಿಂದ ದೆಹಲಿಗೆ ಬೆಳಗ್ಗೆ ತೆರಳಿದಾಗ ಈ ಘಟನೆ ನಡೆದಿದೆ. ಉತ್ತರ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ಗುಜರಾತ್ ಸಮಾಜ್ ಭವನ್ ಬಳಿ ದಮಯಂತಿ ಬೇನ್ ಆಟೋದಿಂದ ಇಳಿಯುವಾಗ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪರ್ಸ್ ದೋಚಿ ಪರಾರಿಯಾಗಿದ್ದಾರೆ. ಆ ಪರ್ಸ್ ನಲ್ಲಿ ಪೋನ್, ಕೆಲ ದಾಖಲೆಗಳು, ಮತ್ತಿತರ ವಸ್ತುಗಳು ಇದ್ದವೆಂದು ಅವರು ದೂರು ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದಮಯಂತಿ ಬೇನ್ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 356  ಹಾಗೂ 379 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕೆಲ ಶಂಕಿತರನ್ನು ಬಂಧಿಸಲಾಗಿದೆ . ಕಳ್ಳತನ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp