'ಉದ್ಯೋಗ ಕೇಳುವ ಯುವಕರಿಗೆ ಚಂದ್ರನನ್ನು ತೋರಿಸುವ ಕೇಂದ್ರ ಸರ್ಕಾರ'- ರಾಹುಲ್ ಗಾಂಧಿ

ಆರ್ಥಿಕ ಹಿಂಜರಿತ, ನಿರುದ್ಯೋಗ ಪ್ರಮಾಣ ಹೆಚ್ಚಳ, ರೈತರ ಸಾಲದಂತಹ ಮಹತ್ವದ ಸಮಸ್ಯೆಗಳಿಂದ ಜನರ ಗಮನವನ್ನು  ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬೇರೆಡೆಗೆ ತಿರುಗಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಮುಂಬೈ: ಆರ್ಥಿಕ ಹಿಂಜರಿತ, ನಿರುದ್ಯೋಗ ಪ್ರಮಾಣ ಹೆಚ್ಚಳ, ರೈತರ ಸಾಲದಂತಹ ಮಹತ್ವದ ಸಮಸ್ಯೆಗಳಿಂದ ಜನರ ಗಮನವನ್ನು  ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬೇರೆಡೆಗೆ ತಿರುಗಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ,  ಅನೇಕ ಯುವಕರು, ರೈತರು ಇಲ್ಲಿರುವುದನ್ನು ನೋಡಿದ್ದೇನೆ. ಯುವಕರಿಗೆ ಉದ್ಯೋಗ ಸಿಕ್ಕಿತೇ? ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯುತ್ತಿದೆಯೇ? ನಿಮ್ಮ ಸಾಲ ಮನ್ನಾ ಆಗಿದ್ದೇಯಾ? ಅಚ್ಚೇ ದಿನವನ್ನು ನೋಡಿದ್ದೀರಾ?  ಎಂದು ಪ್ರಶ್ನಿಸಿದರು. 

ಮಹಾಬಲಿಪುರಂ ನಲ್ಲಿ ನಡೆದ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಜೊತೆಗಿನ ಅನೌಪಚಾರಿಕ ಶೃಂಗಸಭೆಯಲ್ಲಿ ಡೊಕ್ಲಾಮಾ ವಿವಾದ ಬಗ್ಗೆ ಮೋದಿ ಮಾತುಕತೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಇಸ್ರೋದ ಮಹತ್ವಕಾಂಕ್ಷೆಯ ಇತ್ತೀಚಿನ ಚಂದ್ರಯಾನ- 2 ಯೋಜನೆ  ಉಲ್ಲೇಖಿಸಿದ ರಾಹುಲ್ ಗಾಂಧಿ, ಯುವಕರು ಉದ್ಯೋಗ ಕೇಳುತ್ತಿರುವಾಗ, ಸರ್ಕಾರ ಚಂದ್ರನನ್ನು ನೋಡುವಂತೆ ಹೇಳುತ್ತಿದೆ. ದೇಶದ ಪ್ರಮುಖ ಉದ್ಯಮಿಗಳ ಕೈಯಲ್ಲಿ ಮಾಧ್ಯಮಗಳಿದ್ದು, ಯಾವುದೇ ಕೆಲಸ ಕಾರ್ಯಗಳನ್ನು ಪ್ರಶ್ನಿಸುತ್ತಿಲ್ಲ. ದೇಶದ ವಾಸ್ತವ ಸಮಸ್ಯೆಗಳ ಬಗ್ಗೆ ಮೌನವಹಿಸಿವೆ ಎಂದು ಕಿಡಿಕಾರಿದರು. 

ಕಳೆದ 40 ವರ್ಷಗಳಲ್ಲಿಯೇ ಹೆಚ್ಚು ಎನ್ನಬಹುದಾದ ನಿರುದ್ಯೋಗವಿದೆ. 2 ಲಕ್ಷ ಕೈಗಾರಿಕೆಗಳಿಗೆ ಬೀಗ ಹಾಕಲಾಗಿದೆ. ಆಟೋ ಮೊಬೈಲ್ ಕ್ಷೇತ್ರ ಫಿನಿಶ್ ಆಗಿದೆ. ಬೆಳ್ಳಿ ವ್ಯಾಪಾರ ಸ್ಥಗಿತಗೊಂಡಿದೆ. ಆದರೆ, ಮಾಧ್ಯಮಗಳು ಯಾವುದನ್ನು ಮಾತನಾಡುತ್ತಿಲ್ಲ. ಸಂವಿಧಾನದ 370ನೇ ವಿಧಿ ರದ್ದತಿ ಹಾಗೂ ಚಂದ್ರನ ಬಗ್ಗೆ ಮಾತನಾಡುವ ಸರ್ಕಾರ ದೇಶದಲ್ಲಿನ ವಾಸ್ತವ ಸಮಸ್ಯೆಗಳತ್ತ ಚಿತ್ತ ಹರಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com