ಟೈಫೂನ್ ಹಿಗಿಬಿಸ್ ಪೀಡಿತ ಜಪಾನ್ ಗೆ ನೆರವು ನೀಡಲು ಮುಂದಾದ ಪ್ರಧಾನಿ ಮೋದಿ 

ಟೈಫೂನ್ (ಚಂಡಮಾರುತ) ಹಿಗಿಬಿಸ್ ಪೀಡಿತ ಜಪಾನ್ ಗೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಲು ಮುಂದಾಗಿದ್ದಾರೆ. 
ಟೈಫೂನ್ ಹಿಗಿಬಿಸ್ ಪೀಡಿತ ಜಪಾನ್ ಗೆ ನೆರವು ನೀಡಲು ಮುಂದಾದ ಪ್ರಧಾನಿ ಮೋದಿ
ಟೈಫೂನ್ ಹಿಗಿಬಿಸ್ ಪೀಡಿತ ಜಪಾನ್ ಗೆ ನೆರವು ನೀಡಲು ಮುಂದಾದ ಪ್ರಧಾನಿ ಮೋದಿ

ಟೋಕಿಯೋ: ಟೈಫೂನ್ (ಚಂಡಮಾರುತ) ಹಿಗಿಬಿಸ್ ಪೀಡಿತ ಜಪಾನ್ ಗೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಲು ಮುಂದಾಗಿದ್ದಾರೆ. ಭಾರತೀಯ ನೌಕಾಪಡೆ ಜಪಾನ್ ಗೆ ತೆರಳುತ್ತಿದ್ದು, ನೆರವಿನ ಹಸ್ತ ನೀಡಲು ಸಜ್ಜುಗೊಂಡಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. 

ಟೈಫೂನ್ ಗೆ ಈ ವರೆಗೂ 30 ಜನರು ಸಾವನ್ನಪ್ಪಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಟೈಫೂನ್ ಎದುರಿಸಲು ಜಪಾನ್ ನ ಜನತೆ ಹಾಗೂ ನನ್ನ ಸ್ನೇಹಿತ ಶಿಂಜೋ ಅಬೆ ನೇತೃತ್ವದ ನಾಯಕತ್ವ ಸಜ್ಜುಗೊಂಡಿದ್ದು, ಉಂಟಾಗಿರುವ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಹಾಗೂ ತ್ವರಿತಗತಿಯಲ್ಲಿ ನಿರ್ವಹಣೆ ಮಾಡಲಿವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 

ಜಪಾನ್ ನಲ್ಲಿ ಟೈಫೂನ್ ಗೆ ಜೀವ ಕಳೆದುಕೊಂಡಿರುವವರಿಗೆ ಭಾರತೀಯರ ಪರವಾಗಿ ಸಂತಾಪ ಸೂಚಿಸುತ್ತೇನೆ, ವಿಪತ್ತಿನಿಂದ ಜಪಾನ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಆಶಿಸುವುದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com