ಪಾಕ್ ಗೆ ನೀರು ಹರಿಯಲು ಬಿಡುವುದಿಲ್ಲ: ಪ್ರಧಾನಿ ಮೋದಿ

ಭಾರತದಿಂದ ಪಾಕಿಸ್ತಾನಕ್ಕೆ ನೀರು ಹರಿಯಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಚರ್ಕಿ ದಾದ್ರಿ: ಭಾರತದಿಂದ ಪಾಕಿಸ್ತಾನಕ್ಕೆ ನೀರು ಹರಿಯಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಹರಿಯಾಣದ ಚರ್ಕಿ ದಾದ್ರಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಕಳೆದ 70 ವರ್ಷಗಳಿಂದ ಭಾರತ ಮತ್ತು ಹರಿಯಾಣದ ರೈತರಿಗೆ ಸೇರಿದ ನೀರು ಪಾಕಿಸ್ತಾನಕ್ಕೆ ಹರಿದಿದೆ. ಇನ್ನು ಮುಂದೆ ಮೋದಿ ಈ ನೀರನ್ನು ನಿಲ್ಲಿಸಲಿದ್ದು (ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರು), ಆ ನೀರು ನಿಮ್ಮ ಮನೆಗಳಿಗೆ ತರಲಾಗುವುದು ಎಂದರು.

ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರಿನ ಮೇಲೆ ಹರಿಯಾಣ ಹಾಗೂ ರಾಜಸ್ಥಾನ ರೈತರಿಗೆ ಹಕ್ಕಿದೆ. ನೀರನ್ನು ಈ ಹಿಂದಿನ ಸರ್ಕಾರಗಳು ನಿಲ್ಲಿಸಿರಲಿಲ್ಲ. ಆದರೆ ಮೋದಿ ಈಗ ನಿಮ್ಮ ಪರವಾಗಿ ಹೋರಾಟ ಮಾಡಲಿದ್ದಾರೆ ಎಂದರು.

ಇತ್ತೀಚಿಗೆ ಮಹಾಬಲಿಪುರಂಗೆ ಅನೌಪಚಾರಿಕ ಭೇಟಿ ನೀಡಿದ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ತಾವು ದಂಗಲ್ ಸಿನಿಮಾ ನೋಡಿದ್ದಾಗಿ ಹೇಳಿದ ಪ್ರಧಾನಿ, ಅದರಲ್ಲಿ ಭಾರತದ ಹೆಣ್ಣುಮಕ್ಕಳ ಅದ್ಭುತ ಪ್ರದರ್ಶನವನ್ನು ಚೆನ್ನಾಗಿ ಬಿಂಬಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಅಮೀರ್ ಖಾನ್ ಸಿನಿಮಾ ದಂಗಲ್ ನಲ್ಲಿ ಬರುವ ಬಬಿತಾ ಪೋಗಟ್ ಪಾತ್ರ ನಿಜ ಜೀವನದ ವ್ಯಕ್ತಿ ಆಗಿದ್ದು, ಅವರು ಅಕ್ಟೋಬರ್ 21ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ದಾದ್ರಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com