ಜಾರ್ಖಂಡ್: ಹೊಟ್ಟೆ ನೋವು ಎಂದು ಬಂದ ಯುವಕರಿಗೆ ವೈದ್ಯ ಮಾಡಿದ್ದೇನು ಗೊತ್ತೆ?

ಇಬ್ಬರು ಯುವಕರು ಹೊಟ್ಟೆನೋವೆಂದು ವೈದ್ಯರ ಬಳಿ ಹೋಗಿದ್ದರು. ಆದರೆ, ಚಿಕಿತ್ಸೆ ಕೊಡಬೇಕಾಗಿದ್ದ ವೈದ್ಯ ಮಹಾಶಯ ಸರಿಯಾಗಿ ಚೆಕ್ ಮಾಡದೇ ಇಬ್ಬರು ಪುರುಷರನ್ನು ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಬರೆದು ಕಳಿಸಿದ್ದಾನೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಂಚಿ : ಇಬ್ಬರು ಯುವಕರು ಹೊಟ್ಟೆನೋವೆಂದು ವೈದ್ಯರ ಬಳಿ ಹೋಗಿದ್ದರು. ಆದರೆ, ಚಿಕಿತ್ಸೆ ಕೊಡಬೇಕಾಗಿದ್ದ ವೈದ್ಯ ಮಹಾಶಯ ಸರಿಯಾಗಿ ಚೆಕ್ ಮಾಡದೇ ಇಬ್ಬರು ಪುರುಷರನ್ನು ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಬರೆದು ಕಳಿಸಿದ್ದಾನೆ. 

ವೈದ್ಯ ಮಹಾಶಯನ ಈ ಹೇಳಿಕೆ ನೋಡಿ ಯುವಕರಿಬ್ಬರು ಯಾವುದೇ ಪರೀಕ್ಷೆ ಮಾಡಿಸದೇ ತಮ್ಮ ಊರಿಗೆ ಬಂದು ಗ್ರಾಮಸ್ಥರ ಬಳಿ ನಡೆದ ವಿಷಯ ತಿಳಿಸಿದ್ದಾರೆ.

ಜಾರ್ಖಂಡಿನ ಚತ್ರ್‌ ಜಿಲ್ಲೆಯ ಸಿಮಾರಿಯಾದ  ರೆಫರೆಲ್  ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಮುಕೇಶ್ ವಿರುದ್ಧ ಇಂತಹದ್ದೊಂದು ಆರೋಪ ಕೇಳಿ ಬಂದಿದೆ. 

ಅಕ್ಟೋಬರ್ 1 ರಂದು ಈ ಇಬ್ಬರು ಯುವಕರನ್ನು ಕುಟುಂಬದ ಸದಸ್ಯರು ರೆಫರೆಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ, ಡ್ಯೂಟಿಯಲ್ಲಿದ್ದ ಮುಕೇಶ್, ಎಚ್‌ಐವಿ, ಎಚ್‌ಬಿಎ, ಎಚ್‌ಸಿವಿ, ಸಿಬಿಸಿ, ಎಚ್‌ಎಚ್‌2 ಮತ್ತು ಎಎನ್‌ಸಿ ಎಂಬೆಲ್ಲಾ ಟೆಸ್ಟ್ ಬರೆದುಕೊಟ್ಟಿದ್ದರು. ಇದರಲ್ಲಿ ಕೊನೆಗೆ ಇವರು ಬರೆದುಕೊಟ್ಟಿದ್ದು ಮಹಿಳೆ ಗರ್ಭಿಣಿಯಾ, ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಮಾಡಬೇಕಾದ ಪರೀಕ್ಷೆ ಇದಾಗಿದೆ. 

22 ವರ್ಷದ ಗೋಪಾಲ್ ಗಂಜು ಮತ್ತು 26 ವರ್ಷದ ಕಾಮೇಶ್ವರ ಗಂಜು ಇಂತಹ ವಿಶಿಷ್ಟ ಸನ್ನಿವೇಶ ಎದುರಿಸಿದ್ದವರು. ಇವರಿಬ್ಬರು ವೈದ್ಯರು ಬರೆದುಕೊಟ್ಟಿದ್ದ ಚೀಟಿಯನ್ನು ಹಿಡಿದುಕೊಂಡು ಲ್ಯಾಬ್‌ಗೆ ಹೋಗಿದ್ದರು. ಅಲ್ಲಿ `ಎಎನ್‌ಸಿ ಟೆಸ್ಟ್ ನಿಮಗಲ್ಲ. ಮಹಿಳೆಯರಿಗೆ ಮಾಡುವುದು' ಎಂದು ಲ್ಯಾಬಿನವರು ಹೇಳಿದಾಗಲೇ  ಇವರಿಗೆ ಸತ್ಯ ಗೊತ್ತಾಗಿದ್ದು. ಜೊತೆಗೆ, ಲ್ಯಾಬಿನಲ್ಲಿದ್ದ ವೈದ್ಯ ಕೂಡಾ ಒಂದು ಕ್ಷಣ ವೈದ್ಯರ ಚೀಟಿ ನೋಡಿ ದಂಗಾಗಿ ಹೋಗಿದ್ದರು. 

ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಸರ್ಜನ್ ಅರುಣ್ ಕುಮಾರ್ ಪಾಸ್ವಾನ್, ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಇದೊಂದು ಪಿತೂರಿ ಇರಬಹುದು. ನನಗೆ ಶನಿವಾರ ಈ ವಿಷಯ ತಿಳಿದಿದೆ ಹೀಗಾಗಿ ಸತ್ಯಾಸತ್ಯತೆ ತಿಳಿಯಲು ಈ ಪ್ರಕರಣದ ತನಿಖೆಗೂ ಆದೇಶಿಸಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com