ತಿಹಾರ್ ಜೈಲಿನಲ್ಲಿ 10 ದಿನ ಕಳೆದಿದ್ದ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ!

ಸೋಮವಾರ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಪಡೆದಿರಿವ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ತಿಹಾರ್ ಜೈಲುವಾಸ ಅನುಭವಿಸಿದ್ದರು! 
ಅಭಿಜಿತ್ ಬ್ಯಾನರ್ಜಿ
ಅಭಿಜಿತ್ ಬ್ಯಾನರ್ಜಿ

ನವದೆಹಲಿ: ಸೋಮವಾರ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಪಡೆದಿರಿವ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ತಿಹಾರ್ ಜೈಲುವಾಸ ಅನುಭವಿಸಿದ್ದರು! ತಿಹಾರ್ ಜೈಲುವಾಸ, ಪೊಲೀಸರ ಬರ್ಬರತೆ ಕುರಿತು ತಮಗಾದ ಕಹಿ ಅನುಭವನ್ನು ಈ ಬಾರಿ ಆರ್ಥಿಕ ಕ್ಷೇತ್ರದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದಿರುವ ಅಭಿಜಿತ್ ಬ್ಯಾನರ್ಜಿ, ಲೇಖನದಲ್ಲಿ ವಿವರಿಸಿದ್ದಾರೆ.

ಅಭಿಜಿತ್ ಬ್ಯಾನರ್ಜಿ, ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ಕುಲಪತಿಗಳ ವಿರುದ್ಧವೇ ಘೇರಾವ್ ಹಾಕಿ ದೆಹಲಿಯ ತಿಹಾರ್ ಜೈಲು ಸೇರಿದ್ದರು !

ಎಸ್ತರ್ ಡ್ಯುಫ್ಲೋ ಮತ್ತು ಮೈಕೆಲ್ ಕ್ರೆಮೆರ್ ಜತೆ ಸೇರಿ ಜಾಗತಿಕ ಬಡತನ ನಿರ್ಮೂಲನೆಗಾಗಿ ನಡೆಸಿದ ಹೋರಾಟಕ್ಕಾಗಿ ಪ್ರಶಸ್ತಿಗೆ ಭಾಜನರಾಗಿರುವ ಅಭಿಜಿತ್ ಬ್ಯಾನರ್ಜಿ, ಮೂರು ವರ್ಷಗಳ ಹಿಂದೆ ದೆಹಲಿಯ ಪ್ರಮುಖ ದಿನಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಹೇಗೆ ಪೊಲೀಸರು ತಮ್ಮನ್ನು ಯಾವ ರೀತಿ ನಡೆಸಿಕೊಂಡಿದ್ದರು, ಹೊಡೆದಿದ್ದರು ಎಂಬ ಸ್ವಂತ ಅನುಭವ ವಿವರಿಸಿದ್ದಾರೆ.

1983 ರಲ್ಲಿ ವಿದ್ಯಾರ್ಥಿ ಸಂಘದ ನಾಯಕನನ್ನು ಡಿಬಾರ್ ಮಾಡಿದ್ದನ್ನು ಖಂಡಿಸಿ ವಿವಿ ಕುಲಪತಿಗಳ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದ ವೇಳೆ . ಕೊಲೆ ಯತ್ನ ಮತ್ತು ದೊಂಬಿ ಪ್ರಕರಣವನ್ನು ದಾಖಲಿಸಿ ಪೋಲೀಸರು ಬ್ಯಾನರ್ಜಿಯವರನ್ನು ತಿಹಾರ್ ಜೈಲಿಗೆ ಕಳಿಸಿದ್ದರು.10 ದಿನಗಳ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ವೇಳೆ ಅವರ ಮೇಲೆ ದಾಖಲಾಗಿರುವ ಯಾವ ಪ್ರಕರಣಗಳೂ ಸಾಬೀತಾಗಿರಲಿಲ್ಲ.

ಕೋಲ್ಕತ್ತಾದಲ್ಲಿ ಹುಟ್ಟಿದ ಅಭಿಜಿತ್ ಬ್ಯಾನರ್ಜಿ ಕೋಲ್ಕತ್ತಾದ ಪ್ರೆಸಿಡೆನ್ಸಿ ಯೂನಿವರ್ಸಿಟಿ, ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದು ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಇವರ್ಯು ಅರ್ಥಶಾಸ್ತ್ರ ವಿಭಾಗ್ದ ನೊಬೆಲ್ ಪ್ರಶಸ್ತಿ ಗಳಿಸಿದ ಎರಡನೇ ಭಾರತೀಯರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com