ದೇಶದ ಗೋ ಸಂತತಿಯಲ್ಲಿ ಶೇ. 18 ರಷ್ಟು ಹೆಚ್ಚಳ-ವರದಿ

2012ರಿಂದಲೂ ದೇಶದ ಗೋ ಸಂತತಿಯಲ್ಲಿ ಶೇ. 18 ರಷ್ಟು ಹೆಚ್ಚಳವಾಗಿದೆ. 20 ನೇ ಜಾನುವಾರು ಎಣಿಕೆ ವರದಿಯ ಪ್ರಕಾರ, ಭಾರತದಲ್ಲಿನ ಗೋವುಗಳ ಸಂಖ್ಯೆ 14.51 ಕೋಟಿಯಷ್ಟಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2012ರಿಂದಲೂ ದೇಶದ ಗೋ ಸಂತತಿಯಲ್ಲಿ ಶೇ. 18 ರಷ್ಟು ಹೆಚ್ಚಳವಾಗಿದೆ. 20 ನೇ ಜಾನುವಾರು ಎಣಿಕೆ ವರದಿಯ ಪ್ರಕಾರ, ಭಾರತದಲ್ಲಿನ ಗೋವುಗಳ ಸಂಖ್ಯೆ 14.51 ಕೋಟಿಯಷ್ಟಾಗಿದೆ. 

ಹಿಂದಿನ ಎಣಿಕೆಗೆ ಹೋಲಿಸಿದರೆ ಇತ್ತೀಚಿನ ವರದಿಯಲ್ಲಿ ಎಲ್ಲಾ ಜಾನುವಾರುಗಳ ಸಂತತಿಯು ಶೇಕಡಾ 4.6 ರಷ್ಟು ಹೆಚ್ಚಳವಾಗಿದ್ದು 53.57 ಕೋಟಿಗೆ ತಲುಪಿದೆ.

ಕೇಂದ್ರ ಪಶುಸಂಗೋಪನಾ ಸಚಿವಾಲಯ ಇಂದು ಬಿಡುಗಡೆ ಮಾಡಿರುವ 20ನೇ ಜಾನುವಾರ ಎಣಿಕೆ ವರದಿಯಲ್ಲಿ ವಿಸ್ತೃತ ಮಾಹಿತಿಯನ್ನು ನೀಡಲಾಗಿದೆ.  ಈ ಬಾರಿ ಹೊಸ ತಂತ್ರಜ್ಞಾನದ ಮೂಲಕ ಜಾನುವಾರುಗಳ ಎಣಿಕೆ ಮಾಡಲಾಗಿದೆ ಎಂಬುದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. 

ಪ್ರತಿ ಐದು ವರ್ಷಕ್ಕೊಮ್ಮೆ ದೇಶದಲ್ಲಿ ಜಾನುವಾರುಗಳನ್ನು ಎಣಿಕೆ ಮಾಡಲಾಗುತ್ತದೆ. 1919-20ರಲ್ಲಿ ಮೊದಲ ಬಾರಿಗೆ ಜಾನುವಾರಗಳು ಎಣಿಕೆ ಮಾಡಲಾಗಿತ್ತು. ನಂತರ 1924-25 ರಲ್ಲಿ ಎರಡನೇ ಬಾರಿಗೆ ಮಾಡಲಾಗಿತ್ತು, ಸ್ವಾತಂತ್ರ್ಯ ನಂತರ 1951ರಲ್ಲಿ ನಂತರ ಪ್ರತಿ ವರ್ಷಕ್ಕೊಮ್ಮೆ ಜಾನುವಾರುಗಳ ಎಣಿಕೆ ಮಾಡಲಾಗುತ್ತಿದೆ. 

ಪ್ರಸ್ತುತ 2017ರಲ್ಲಿ 20ನೇ ಕಂತಿನಲ್ಲಿ ಜಾನುವಾರಗಳ ಎಣಿಕೆ ನಡೆಯುತ್ತಿದೆ. ಇದಕ್ಕೂ ಹಿಂದೆ 2007-12ರಲ್ಲಿ ಜಾನುವಾರುಗಳ ಎಣಿಕೆ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com