ರೈಲ್ವೆ ಇಲಾಖೆಯಿಂದ ಇದೇ ಮೊದಲ ಬಾರಿಗೆ ‘ಪ್ರೊಮೋಷನ್ ಆನ್ ವ್ಹೀಲ್ಸ್’

ಕಲೆ, ಸಂಸ್ಕೃತಿ, ಸಿನಿಮಾ, ಕ್ರೀಡೆ ಮತ್ತಿತರ ಕ್ಷೇತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ರೈಲ್ವೆ ಇಲಾಖೆ ಹೊಸ ಯೋಜನೆಯನ್ನು ಹೊರತಂದಿದೆ.
ಹೌಸ್ ಫುಲ್ 4 ಚಿತ್ರದ ಸ್ಟಿಲ್
ಹೌಸ್ ಫುಲ್ 4 ಚಿತ್ರದ ಸ್ಟಿಲ್

ನವದೆಹಲಿ: ಕಲೆ, ಸಂಸ್ಕೃತಿ, ಸಿನಿಮಾ, ಕ್ರೀಡೆ ಮತ್ತಿತರ ಕ್ಷೇತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ರೈಲ್ವೆ ಇಲಾಖೆ ಹೊಸ ಯೋಜನೆಯನ್ನು ಹೊರತಂದಿದೆ.

ಈ ಎಲ್ಲಾ ಕ್ಷೇತ್ರಗಳ ಕೊಡುಗೆಗಳಿಗೆ ‘ಚಕ್ರಗಳ ಮೇಲೆ ಪ್ರಚಾರ’(‘ಪ್ರೊಮೋಷನ್ ಆನ್ ವ್ಹೀಲ್ಸ್’) ರೈಲುಗಳ ಮೂಲಕ ಪ್ರಚಾರ ನೀಡಲು ಇಲಾಖೆ ಮುಂದಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ರೈಲ್ವೆ ಇಲಾಖೆ, ಈ ಯೋಜನೆಯ ಆರಂಭಿಕ ಹಂತವಾಗಿ ಬಾಲಿವುಡ್ ಸಿನಿಮಾ ‘ಹೌಸ್ ಫುಲ್ 4’ ಚಿತ್ರಕ್ಕೆ ಪ್ರಚಾರ ನೀಡಲಾಗುವುದು.

‘ಪ್ರೊಮೋಷನ್ ಆನ್ ವ್ಹೀಲ್ಸ್’ ವಿಶೇಷ ರೈಲಿನಲ್ಲಿ ಚಿತ್ರದ ಕಲಾವಿದರು ಹಾಗೂ ಮಾಧ್ಯಮ ಪ್ರತಿನಿಧಿಗಳು ಪ್ರಯಾಣಿಸಲಿದ್ದಾರೆ. ಇದು ರೈಲ್ವೆ ಇಲಾಖೆಗೆ ಕೂಡ ಆದಾಯ ತಂದುಕೊಡಲಿದೆ ಎಂದು ಮಾಹಿತಿ ನೀಡಿದೆ. 

ಭಾರತೀಯ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಇಲಾಖೆಗಳು ಹೌಸ್ ಫುಲ್ 4 ಚಿತ್ರ ತಂಡದೊಂದಿಗೆ ಈ ಪ್ರಚಾರ ಕಾರ್ಯ ಕೈಗೆತ್ತಿಕೊಳ್ಳಲಿದ್ದಾರೆ. 

ಸೆಲೆಬ್ರಿಟಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಬುಧವಾರ ಮುಂಬೈ ಸೆಂಟ್ರಲ್ ನಿಂದ 8 ಬೋಗಿಯ ವಿಶೇಷ ರೈಲಿನಲ್ಲಿ ಪ್ರಯಾಣಿಸಲಿದ್ದು, ಅ. 17ರಂದು ಹಿಂದಿರುಗಲಿದ್ದಾರೆ. 
  
ಈ ವಿಶೇಷ ರೈಲುಗಳು ಹಲವು ರಾಜ್ಯಗಳು ಹಾಗೂ ಸೂರತ್, ವಡೋದರ ಹಾಗೂ ಕೋಟಾದಂತಹ ಪ್ರಮುಖ ಜಿಲ್ಲೆಗಳಲ್ಲಿ ಸಾಗಲಿದೆ. ಮಾರ್ಗಮಧ್ಯದ ರೈಲ್ವೆ ನಿಲ್ದಾಣಗಳಲ್ಲಿ ಕಲಾವಿದರು ಚಿತ್ರದ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಪಶ್ಚಿಮ ರೈಲ್ವೆ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ ರವೀಂದ್ರ ಭಾಕರ್ ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com