ಅಟ್ಟಾರಿ ಗಡಿಯಲ್ಲಿ ಪಾಕ್ ಒಳನುಸುಳುಕೋರನ ಹತ್ಯೆ

ಭಾರತ- ಪಾಕಿಸ್ತಾನದ ಅಟಾರಿ ಭಾಗದಲ್ಲಿ ಗಡಿ ಭದ್ರತಾ ಯೋಧರು ಪಾಕ್ ಒಳನುಸುಳುಗಾರನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

Published: 17th October 2019 01:07 PM  |   Last Updated: 17th October 2019 01:28 PM   |  A+A-


Attari-BSF

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಅಮೃತಸರ: ಭಾರತ- ಪಾಕಿಸ್ತಾನದ ಅಟಾರಿ ಭಾಗದಲ್ಲಿ ಗಡಿ ಭದ್ರತಾ ಯೋಧರು ಪಾಕ್ ಒಳನುಸುಳುಗಾರನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಅಟಾರಿ  ರೈಲ್ವೇ ಟ್ರಾಕ್ ಬಳಿ ಭಾರತದ ಗಡಿಯೊಳಗೆ ನುಸುಳಲು ಯತ್ನ ಮಾಡುತ್ತಿದ್ದ ಸಮಯದಲ್ಲಿ ನಮ್ಮ ಯೋಧರು ಹೊಡೆದುರುಳಿಸಿದ್ದಾರೆ. ಮೃತ ಪಾಕ್ ನುಸುಳು ಕೋರನನ್ನು ಗುಲ್ ನವಾಜ್ ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿಯ ವೇಳೆಗೆ ಗೇಟ್ ನಂ 103ರಲ್ಲಿ ವ್ಯಕ್ತಿಯೊಬ್ಬ ಗಡಿ ದಾಟುತ್ತಿರುವುದು ಯೋಧರ ಗಮನಕ್ಕೆ ಬಂದಿತ್ತು. ಬಿಎಸ್ ಎಫ್ ಯೋಧರು ಪಾಕ್ ನುಸುಳುಕೋರನಿಗೆ  ಹಿಂದೆ ಹೋಗುವಂತೆ ಸೂಚಿಸಿದ್ದರೂ  ಆದರೆ ಆತ ನಿರಾಕರಿಸಿದ್ದ. ನಂತರ ಯೋಧರು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೇನಾ ಮೂಲಗಳ ಪ್ರಕಾರ, ಜಂಟಿ ಚೆಕ್ ಪೋಸ್ಟ್ ಅಟ್ಟಿಕ್‌ನಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಸಿಬ್ಬಂದಿ ಸಂಜೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಸೈನಿಕರಿಗೆ ಪಾಕಿಸ್ತಾನದಿಂದ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿರುವ ವ್ಯಕ್ತಿಯನ್ನು ನೋಡಿದ್ದಾರೆ. ಆತನಿಗೆ ಹಿಂತಿರುಗುವಂತೆ ಬಿಎಸ್ಎಫ್ ಯೋಧರು ಎಚ್ಚರಿಸಿದರಾದರೂ, ಆತ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಒಳಬರುತ್ತಿದ್ದ. ಹೀಗಾಗಿ ಆತನ ಮೇಲೆ ಗುಂಡು ಹಾರಿಸಲಾಯಿತು ಎನ್ನಲಾಗಿದೆ. 

ಗುಂಡೇಟಿನಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಆತ ತಕ್ಷಣವೇ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ. ಬಿಎಸ್ಎಫ್ ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಬಳಿ ಇದ್ದ ಬ್ಯಾಗ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಸಲ್ವಾರ್-ಕಮೀಜ್, 160 ರೂಪಾಯಿ ಪಾಕ್ ಕರೆನ್ಸಿ (50-50ರ ಮೂರು ನೋಟುಗಳು ಮತ್ತು 5-5 ರೂಪಾಯಿಗಳ ಎರಡು ನಾಣ್ಯಗಳು ಸೇರಿದಂತೆ), ಒಂದು ಪರ್ಸ್, ಸಿಮ್ ಕಾರ್ಡ್, ಮೆಮೊರಿ ಕಾರ್ಡ್, ಒಂದು ಲೈಟರ್ ಮತ್ತು 1 ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿದೆ.

ಘಟನೆ ಬಳಿಕ ಬಿಎಸ್ಎಫ್ ಡಿಐಜಿ ಜೆಎಸ್ ಒಬೆರಾಯ್ ಮತ್ತು ಇತರ ಅಧಿಕಾರಿಗಳು ಭಾರತೀಯ ಪ್ರದೇಶದಾದ್ಯಂತ ಫೆನ್ಸಿಂಗ್ ತಲುಪಿ ತೀವ್ರ ಶೋಧ ನಡೆಸಿದ್ದಾರೆ. ಬಿಎಸ್ಎಫ್ ಫೆನ್ಸಿಂಗ್ ಕ್ರಾಸಿಂಗ್ ರೈಲ್ವೆ ಗೇಟ್ ಮತ್ತು ಅದರ ಸುತ್ತಲಿನ ಜಾಗಗಳಲ್ಲಿ ಹದ್ದಿನ ಕಣ್ಣು ಇರಿಸಲಾಗಿದೆ.

ಶವ ಸ್ವೀಕರಿಸಲು ಪಾಕ್ ನಿರಾಕರಣೆ
ಇನ್ನು ಪಾಕ್ ರೇಂಜರ್ಸ್‌ನೊಂದಿಗೆ ಧ್ವಜ ಸಭೆ ನಡೆಸಿದ ನಂತರ ಬಿಎಸ್‌ಎಫ್ ಅಧಿಕಾರಿಗಳು ತಕ್ಷಣ ಈ ಬಗ್ಗೆ ಮಾಹಿತಿ ನೀಡಿದರು ಮತ್ತು ಗುರುತಿಸಲು ಕೇಳಿಕೊಂಡರು, ಆದರೆ ಪಾಕ್ ರೇಂಜರ್ಸ್ ಶವವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp