3 ವರ್ಷಗಳಲ್ಲಿ 207 ಪ್ರಕರಣ: ಮಂಗಳೂರು ಸೈಬರ್ ಕ್ರೈಮ್ ಬ್ರಾಂಚ್ ಇತ್ಯರ್ಥಗೊಳಿಸಿದ್ದು ಕೇವಲ 6!

ಮಂಗಳೂರು ವಿಭಾಗದ ಸಿಟಿ ಸೈಬರ್ ಕ್ರೈಮ್ ಬ್ರಾಂಚ್ (ಸಿಸಿಸಿಬಿ) ಪ್ರಾರಂಭವಾಗಿ 3 ವರ್ಷಗಳಾಗಿದೆ. ಈ ವರೆಗೆ ಒಟ್ಟಾರೆ 207 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಇತ್ಯರ್ಥಗೊಳಿಸಲು ಸಾಧ್ಯವಾಗಿರುವುದು ಕೇವಲ 6 ಪ್ರಕರಣಗಳನ್ನಷ್ಟೇ!
3 ವರ್ಷಗಳಲ್ಲಿ 207 ಪ್ರಕರಣ: ಮಂಗಳೂರು ಸೈಬರ್ ಕ್ರೈಮ್ ಬ್ರಾಂಚ್ ಇತ್ಯರ್ಥಗೊಳಿಸಿದ್ದು ಕೇವಲ 6!
3 ವರ್ಷಗಳಲ್ಲಿ 207 ಪ್ರಕರಣ: ಮಂಗಳೂರು ಸೈಬರ್ ಕ್ರೈಮ್ ಬ್ರಾಂಚ್ ಇತ್ಯರ್ಥಗೊಳಿಸಿದ್ದು ಕೇವಲ 6!

ಮಂಗಳೂರು: ಮಂಗಳೂರು ವಿಭಾಗದ ಸಿಟಿ ಸೈಬರ್ ಕ್ರೈಮ್ ಬ್ರಾಂಚ್ (ಸಿಸಿಸಿಬಿ) ಪ್ರಾರಂಭವಾಗಿ 3 ವರ್ಷಗಳಾಗಿದೆ. ಈ ವರೆಗೆ ಒಟ್ಟಾರೆ 207 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಇತ್ಯರ್ಥಗೊಳಿಸಲು ಸಾಧ್ಯವಾಗಿರುವುದು ಕೇವಲ 6 ಪ್ರಕರಣಗಳನ್ನಷ್ಟೇ!

ಸಿಸಿಸಿಬಿ ನೀಡಿರುವ ಮಾಹಿತಿಯ ಪ್ರಕಾರ ಮಂಗಳೂರಿನಲ್ಲಿ 2018 ರಲ್ಲಿ 75 ಪ್ರಕರಣಗಳು ದಾಖಲಾಗಿದ್ದವು, ಈ ಪೈಕಿ ಇತ್ಯರ್ಥಗೊಂಡಿದ್ದು ಒಂದೇ ಒಂದು ಪ್ರಕರಣವಷ್ಟೇ! ಈ ವರ್ಷದಲ್ಲಿ ಒಂದೇ ಒಂದೂ ಪ್ರಕರಣವೂ ಇತ್ಯರ್ಥಗೊಳಿಸಲು ಸಾಧ್ಯವಾಗಿಲ್ಲ. 

ಡಿಜಿಟಲ್ ಬಳಕೆ ಹೆಚ್ಚಾಗುತ್ತಿರುವುದರ ಜೊತೆಗೆ ಅಷ್ಟೇ ಪ್ರಮಾಣದ ಡಿಜಿಟಲ್ ಅಪರಾಧಗಳೂ ಸಂಭವಿಸುತ್ತಿವೆ. ಬ್ಯಾಂಕ್ ವಂಚನೆ, ಎಟಿಎಂ ನಿಂದ ಹಣ ದೋಚುವುದು (ಎಟಿಎಂ ಸ್ಕಿಮ್ಮಿಂಗ್)  ನೈಜೀರಿಯಾ ಪ್ರಜೆಗಳ ಅಪರಾಧ ಪ್ರಕರಣಗಳು ಹೀಗೆ ಹಲವು ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಡೆಬಿಟ್ ಕಾರ್ಡ್ ವಂಚನೆ, ಎಟಿಎಂ ಸ್ಕಿಮ್ಮಿಂಗ್, ವಿವಾಹ ವಂಚನೆ, ಡೇಟಿಂಗ್ ಆಪ್, ಒಎಲ್ಎಕ್ಸ್ ವಂಚನೆಗಳು ಬೆಳಕಿಗೆ ಬರುತ್ತಿವೆ. 

ಕ್ರೈಮ್, ಟ್ರಾಫಿಕ್ ವಿಭಾಗದ ಡಿಸಿಪಿ ಲಕ್ಷ್ಮಿ ಗಣೇಶ್ ಈ ಬಗ್ಗೆ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಈ ಎಲ್ಲಾ ಪ್ರಕರಣಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿರುವ ವ್ಯಾಪ್ತಿಯದ್ದು. ಬಹುತೇಕ ಪ್ರಕರಣಗಳಲ್ಲಿ ವಂಚಕರು ಜಾರ್ಖಂಡ್, ಬಿಹಾರ, ಮುಂಬೈ ಸೇರಿದಂತೆ ಉತ್ತರ ಭಾರತದ ಪ್ರದೇಶಕ್ಕೆ ಸೇರಿರುತ್ತಾರೆ. ಹಣ ದೋಚಿ ಪರಾರಿಯಾಗುತ್ತಾರೆ. ಪ್ರತಿ ಬಾರಿಯೂ ಅಲ್ಲಿನ ಪೊಲೀಸರೊಂದಿಗೆ ಸಂಪರ್ಕ ಸಾಧಿಸುವುದು ಕಷ್ಟ ಸಾಧ್ಯ ಅಷ್ಟೇ ಅಲ್ಲದೇ ಸಿಸಿಸಿಬಿ ಗೆ ಈಗ ಯಾವುದೇ ಇನ್ಸ್ ಪೆಕ್ಟರ್ ಗಳಿಲ್ಲ, ಸಿಬ್ಬಂದಿ ಹಾಗೂ ತಂತ್ರಜ್ಞಾನದ ಕೊರತೆ ಇರುವುದರಿಂದ ಪ್ರಕರಣಗಳನ್ನು ಸುಲಭವಾಗಿ ಇತ್ಯರ್ಥಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. 

ಮತ್ತೋರ್ವ ಸೈಬರ್ ಪೊಲೀಸ್ ಅಧಿಕಾರಿ ಮಾತನಾಡಿ ಇಡೀ ದೇಶದಲ್ಲಿರುವ ಸೈಬರ್ ಕ್ರೈಮ್ ಸ್ಟೇಷನ್ ಗಳು ಒಂದೇ ವ್ಯಾಪ್ತಿಗೆ ಬರಬೇಕು, ಆಗ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಸುಲಭ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com